Monday, 27 June 2016

ವಾರದ ಕಥೆ :: ಮರಿಯಪ್ಪನ ಪಾರ್ಕ್ ನಲ್ಲಿ ಆ ಸಂಜೆ‌







ವಾರದ ಕಥೆ :: ಮರಿಯಪ್ಪನ ಪಾರ್ಕ್ ನಲ್ಲಿ ಆ ಸಂಜೆ‌ 
*******
ನಾವು ಪಾರ್ಕಿಗೆ ಹೋಗುವುದು ವಾರಾಂತ್ಯದ ಅತಿಥಿಗಳಂತೆ.. ಅದೂ ಮಗುವಿನ ಒತ್ತಾಯಕ್ಕೆ, ಸಮಯ ಸಿಕ್ಕಾಗ, ಮಳೆಬರುವುದೆಂಬ ನೆಪ, ಹೀಗೆ ಇಲ್ಲ ಸಲ್ಲದ ನೆಪವೊಡ್ಡಿ ತಪ್ಪಿಸಿಕೊಳ್ಳುವುದು.. ಕಾರಣ ನನಗೆ ಇಷ್ಟವಿಲ್ಲ. ಅನ್ನುವುದಕ್ಕಿಂತಲೂ ಹಸಿರನ್ನೇ ಹೊದ್ದು ಮಲಗಿರುವ ಪ್ರಕೃತಿ ಮಾತೆ ಮಡಿಲಿನಲಿ ಬೆಳೆದ ನನಗೆ ಇದು ಕೃತಕವೆನಿಸುತ್ತದೆ.. ಹಸಿರನ್ನು ನೋಡಲೆಂದೇ ಒಂದು ಕಡೆ ಹೋಗಬೇಕು ಎಂದಾಗ ಮನಸ್ಸಿಗೆ ಬೇಸರದ ಛಾಯೆ. ನಮ್ಮ ಕರಾವಳಿಯ ಸೊಬಗು, ಸಾಲುಮರಗಳು,ಪಶುಪಕ್ಷಿಗಳ ಸುಪ್ರಭಾತ ರಾತ್ರಿ ಮಲಗುವಾಗ ಜೋಗುಳ ,ನಗುವಾಗ ಗೆಳತಿ, ಅಳುವಾಗ ಜೊತೆಗಾತಿ ಹೀಗೆ ಉಸಿರಾಗಿರುವ ಅವಳನ್ನು ಬಿಟ್ಟು ಬಂದು ನಾನು ಅನಾಥೆಯಾದಂತಹ ಭಾವ.
***
ಆದರೂ ಮಗುವಿಗೆ . ಅವನಿಗೆ ಇದಲ್ಲದೇ ಬೇರೆ ಏನಿದೆ ಮರಗಿಡ, ಪಕ್ಷಿಗಳೆಂದು ತೋರಿಸಲು..
ಅದಕ್ಕಾದರೂ ಹೋಗುವುದು. ಹತ್ತಿರವಾಗಿದ್ದರೆ ದಿನವೂ ಹೋಗಬಹುದಿತ್ತು. ಬಸ್ಸಿನಲ್ಲೇ ಇಲ್ಲಾ ಆಟೋದಿಂದ ಹೋಗಬೇಕೆಂದು ಬೇಜಾರು.ಅದಕ್ಕೆ ಅಪರೂಪಕ್ಕೆ ಬೇಟಿ ನೀಡುವುದು. ಮೊನ್ನೆ ರವಿವಾರ ಸಂಜೆ ಮಳೆಯೂ ಸಹ ಕಡಿಮೆ ಇತ್ತು.. ಮನಸ್ಸು ಮಾಡಿ ಹೋಗಿದ್ದೆವು. ಇಷ್ಟೆಲ್ಲಾ ಇದ್ದರೂ ಆ ಹಸಿರನ್ನು ನೋಡಿದರೇ ನನ್ನೇ ನಾ ಮರೆಯುವುದಂತು ನಿಜ. ತಿಳಿಯದೇನೆ ಬಾಲ್ಯಕ್ಕೆ ಸಾಗುವೆ..‪#‎ಮಗು‬ ಅವನಷ್ಟಕ್ಕೆ ಮುದ್ದಾಗಿ ಹೆಜ್ಜೆ ಇಡುತ್ತಿದ್ದ. ‪#‎ಇವರು‬ಸ್ವಲ್ಪ ಹೊಟ್ಟೆ ಬಂದಿದೆ ಕರಗಿಸಿಕೊಳ್ಳಬೇಕು , ದಿನ ಇಲ್ಲಿಗೆ ಬರಬೇಕು ಎಂದು ಆರಂಭಶೂರರಂತೆ ಮಾತು ಉದುರಿಸಿದರು.. ನಾನೋ ಯಾವುದೋ ಕನಸಿನ ಲೋಕಕ್ಕೆ ತೇಲಿದೆ. ಒಂದು ಸುತ್ತು ಬಂದು ಕುಳಿತೆ. ಮಗುವನ್ನು ಆಡಿಸಲು ಕರೆದುಕೊಂಡು ಹೋದರು..
ಹಾಗೆ ಸುತ್ತ ಕಣ್ಣಾಡಿಸಿದೆ....
***

ಜೋಕಾಲಿಯಲಿ ಜೀಕುವ ಮಕ್ಕಳು, ಆನೆ ಸೋಂಡಿಲಿನ ಜಾರು ಬಂಡಿಯಲ್ಲಿ ಜಾರುವ ಮಕ್ಕಳು, ಕೆಲವು ಮಕ್ಕಳಂತೂ ಹೆತ್ತವರ ಎದುರು ಧೈರ್ಯ ಪ್ರದರ್ಶಿಸುವುದು, ಕೆಲವು ಮಕ್ಕಳು ಒಂದು ಹೆಜ್ಜೆ ಮುಂದಿಡಲೂ ಭಯಗೊಳ್ಳುತ್ತಿದ್ದವು.. ನಿಜ. ಹುಟ್ಟಿನಿಂದಲೇ ಈ ಧೈರ್ಯ, ಭಯವೆಲ್ಲ ಬರುವಂತದ್ದು ಅನ್ನಿಸಿತು. ಕೆಲವು ಅಪ್ಪದಿರು ಉತ್ಸಾಹದಿಂದಿದ್ದರು, ಕೆಲವರು ಮುಖ ಸಿಂಡರಿಸಿಕೊಂಡಿದ್ದರು, ಕೆಲವರಿಗೆ ಹೊಟ್ಟೆ ಭಾರ ಬಾಗಲೂ ಆಗುತ್ತಿರಲಿಲ್ಲ. ಕೆಲವು ಮಕ್ಕಳು ಬಿದ್ದು ಅಳುವುದು, ಅಣ್ಣನು ಆಡುವುದನ್ನು ನೋಡಿ ಕೇಕೆ ಹಾಕಿ ನಗುವ ಪುಟ್ಟಮಗು, ಕೆಲ ಹಿರಿಯರು ತಮ್ಮ ವೃತ್ತಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಕೆಲವರು ಹಿರಿಯ ಮಹಿಳೆಯರು ಸೊಸೆಯಂದಿರ ದೂರು ಹೇಳುತ್ತಲೇ ೩-೪ಸುತ್ತು ಸುತ್ತಿದರು. ಕೆಲವರಂತು ಕಿವಿಗೆ ಸಂಗೀತ ಸಿಕ್ಕಿಸಿಕೊಂಡು ನಡೆಯುತ್ತಿದ್ದರು. ಕೆಲವು ಹುಡುಗರು ಓಡುವುದು, ಶೆಟಲ್ ಆಟ ಒಂದು ಕಡೆ.. ಬಲೂನು ಮಾರುವಾತ ತನ್ನೆಲ್ಲ ಉಸಿರನ್ನು ಬಲೂನೊಳಗೆ ತುಂಬಿಸಿ ಮಾರಾಟಕ್ಕಿಟ್ಟಿದ್ದ... ಅದನ್ನು ಪಡೆಯಲು ಮಕ್ಕಳ ಹಠ, ತಾಯಿಯಂದಿರ ಸಿಡುಕು. ಹಕ್ಕಿಗಳೆಲ್ಲ ತಮ್ತಮ್ಮ ಗೂಡು ಸೇರುತ್ತಿದ್ದವು, ಕೆಲವು ನೆನೆದ ಜೋಡಿ ಹಕ್ಕಿಗಳು ಅಂಟಿಕೊಂಡು ಕುಳಿತು ಮೈಬಿಸಿ ಮಾಡಿಕೊಳ್ಳುತ್ತಿದ್ದವು. 
ಹಾಸ್ಯ ಮಾಡುತ್ತ ಗೆಳೆಯರ ಕಾಲ್ ಎಳೆಯುವವರ ಗುಂಪು, ಏನೋ ತಾಳ ತಪ್ಪಿತೆಂದು ಗೆಳೆಯನ ಹತ್ತಿರ ಹೇಳಿ ಅಳುತ್ತಿರುವ ಹುಡುಗಿ.. ಮನೆಮನೆ ಕಥೆ , ಪೆನ್ನು ಪೇಪರ್ ಹಿಡಿದು ಬರೆಯುತ್ತಿದ್ದ ಯುವಕವಿ. ಪಾನಿಪುರಿ ಮಾರುವಾತ. ಕೆಲವರು ತಮ್ಮ ನಾಯಿಯ ಜೊತೆ ನಡಿಗೆ, ಅದಕ್ಕೆ ಪ್ರತಿಸ್ಪರ್ಧಿ ಯಂತೆ ಬೀದಿನಾಯಿಗಳು ಸುತ್ತು ಬರುತ್ತಿದ್ದವು. ನಾರ್ಥ್ ಈಸ್ಟ್ , ತಮಿಳರು, ತೆಲುಗು ಜನರು, ಮಾರ್ವಾಡಿಗಳು, ಕನ್ನಡಿಗರು, ಮುಸಲ್ಮಾನರು, ಹಿರಿಯರು ಕಿರಿಯರು, ಎಲ್ಲರ ಸಮಾಗಮ.. 
**


ಗೇಟಿನಿಂದ ಹೊರಗೆ ಒಂದಷ್ಟು ಸ್ವಂತವಾಹನಗಳು ಕಾಯುತ್ತ ನಿಂತಿದ್ದವು, ಕೆಲವರು ಕಾರಿನಲ್ಲಿ ಬಂದು "ಅಯ್ಯೋ ಕೆಸರಾಗುತ್ತೆ, ಮಳೆ ಬೇರೆ ಬಂದಿದೆ , ಬೇಡ ಇಳಿಯುವುದು .." ಎಂದು ವಾಪಾಸ್ಸಾದರು. ಸುತ್ತ ತಿಂಡಿ ತಿನಿಸಿನ ವ್ಯಾಪಾರಿ ಅಂಗಡಿಗಳು... ಒಂದಕ್ಕೆ ಎರಡು ರೇಟು, ಬೇಡವೆಂದರೂ ಮಕ್ಕಳ ಹಠಕ್ಕೆ ತೆಗೆದುಕೊಳ್ಳುವುದು... ಜಾತಿ ಧರ್ಮ ದ , ಗಡಿರೇಖೆಯ ಎಲ್ಲೆ ಮೀರಿದ ಆ ಮುಗ್ಧ‌ಮಕ್ಕಳು ಜೊತೆಗೆ ಆಡುವುದನ್ನು ನೋಡುವುದೇ ಮನಸ್ಸಿಗೆ ಹಿತ.. 
ಅಬ್ಬಾ ಒಂದಾ.. ಎರಡಾ. ನಾನು ಮನದಲ್ಲೆ ಎಲ್ಲವನ್ನು ಸವಿಯುತ್ತಾ ಹಕ್ಕಿಗಳಿಗೆ ಶುಭರಾತ್ರಿ ಹೇಳಿ ಅಲ್ಲಿಂದ ಹೊರಟೆ .. 
.
ಸಿಂಧು ಭಾರ್ಗವ್ ‌..



Friday, 24 June 2016

ಕವಿತೆ - ನನ್ನ ಪ್ರೀತಿ ನೌಕೆ



*(@)*
ನನ್ನದೇ‌‌ ಪ್ರೀತಿಯ‌ ನೌಕೆ
ಸಾಗುತಿದೆ ಎಂದಿನಂತೆ...
ಗಾಳಿ ಬಿರುಗಾಳಿ ಬಂದರೂನು
ಇಲ್ಲ ನನಗೆ ಚಿಂತೆ...
😊😍😊
ಹುಟ್ಟು ಸಾವು ನಗುವು ಅಳುವು,
ಒಂದೇ ನಾಣ್ಯದ ಎರಡು ಮೊಗವು...
ನೇಹ-ಪ್ರೀತಿ ಜೊತೆಗೆ ಇರೆ
ಆಗುವುದು ಮನಸ್ಸು ಮಗುವು..
😟😟
ನೆಮ್ಮದಿ ಕದಡುವ ಸುಳಿವು
ಹತ್ತಿರದಲ್ಲೇ ಇದೆ...
ನೌಕೆ  ಮುಳುಗುವ ಸೂಚನೆ
ಸಿಕ್ಕ ಹಾಗಿದೆ...
😍😊😍
ನಾಕು ದಿನದ ಜೀವನಕೆ ಜೊತೆಯಾದ ಪ್ರೀತಿ...
ಉಸಿರಲಿ ಬೆರತ ಮೇಲೆ
ನನಗಿಲ್ಲ ಭೀತಿ...
😊😍😊

- #ಸಿಂಧು ಭಾರ್ಗವ್ .


ಕವಿತೆ - ನನ್ನ ಪ್ರೀತಿ ನೌಕೆ



*(@)*
ನನ್ನದೇ‌‌ ಪ್ರೀತಿಯ‌ ನೌಕೆ
ಸಾಗುತಿದೆ ಎಂದಿನಂತೆ...
ಗಾಳಿ ಬಿರುಗಾಳಿ ಬಂದರೂನು
ಇಲ್ಲ ನನಗೆ ಚಿಂತೆ...
😊😍😊
ಹುಟ್ಟು ಸಾವು ನಗುವು ಅಳುವು,
ಒಂದೇ ನಾಣ್ಯದ ಎರಡು ಮೊಗವು...
ನೇಹ-ಪ್ರೀತಿ ಜೊತೆಗೆ ಇರೆ
ಆಗುವುದು ಮನಸ್ಸು ಮಗುವು..
😟😟
ನೆಮ್ಮದಿ ಕದಡುವ ಸುಳಿವು
ಹತ್ತಿರದಲ್ಲೇ ಇದೆ...
ನೌಕೆ  ಮುಳುಗುವ ಸೂಚನೆ
ಸಿಕ್ಕ ಹಾಗಿದೆ...
😍😊😍
ನಾಕು ದಿನದ ಜೀವನಕೆ ಜೊತೆಯಾದ ಪ್ರೀತಿ...
ಉಸಿರಲಿ ಬೆರತ ಮೇಲೆ
ನನಗಿಲ್ಲ ಭೀತಿ...
😊😍😊

- #ಸಿಂಧು ಭಾರ್ಗವ್ .


ಭಟ್ಟರ ಸಾಲುಗಳು ೦೨

(@)(
"ಭಟ್ರು ಪಿಚ್ಚರ್ ನೋಡಿದ್ರೆ ಏನೇನೋThoughts ಬರುತ್ತೆ
ಬೇಡ ಅ೦ದ್ರೂ ಪೆನ್ನು ಗೀಚೋಕೆ ಶುರುಮಾಡ್ತದೆ...
Dull ಆಗಿರೊ ಮನಸ್ಸಲ್ಲಿ ಉತ್ಸಾಹ ಚಿಮ್ಮುತ್ತೆ...
Life ಇಷ್ಟೇನಾ...?! ಅ೦ತ Easy ಆಗ್ ತಗೋಬೇಕ್ ಆನ್ಸುತ್ತೆ.."


(@)(
ಹನ್ನೊ೦ದು ವರ್ಷಕ್ಕೆಲ್ಲ ಗ೦ಡ್_ಹೈಕ್ಳಿಗೆ ಮೀಸೆ ಬರ್ತದೆ,
ಇನ್ನೊ೦ದು ವರ್ಷ ಕಾಯೋದ್ರೊಳಗೆ ಲವ್ವಲ್ಲಿ ಬೀಳ್ತವೆ,
ಪಿ.ಯೂ.ಸಿ ಮುಗಿಸೋದ್ರೊಳಗೆ ಕೈಗೆ ಮಗಿನ ಕೊಡ್ತವೆ,
Genaration ಇಷ್ಟು Fast ಆಗೋಯ್ತಾ ಸಿವನೇ... ಅ೦ತ ಅಜ್ಜ ಅಳ್ತವ್ನೆ..


(@)(
ಕಸ ಆದ್ರೂ ಕೂಡ ನೀರಲ್ಲಿ ತೇಲಿ ಬರ್ತಾ ಇರುತ್ತೆ..
ಕಷ್ಟಗಳು ಹಾಗೆ ಕಣ್ರಪ್ಪಾ... ನಮ್ಮ ಜೀವನದಲ್ಲಿ ತೇಲಿ ಹೋಗ್ತಾ ಇರ್ತವೆ...
(( ಏನಿದ್ರು Light ಆಗ್ ತಗೊಬೇಕು ))


(@)(
ಪಿಜ್ಜಾ ಮೇಲೆ ಚೆನ್ನಾಗಿ ಜೋಡಿಸಿರೋ ಹಸಿಬಿಸಿ
ಟೋಮೆಟೊ, ಆನಿಯನ್ ತರಾನೆ,
ನಮ್ಮ ನಡುವೆ ಚೆನ್ನಾಗಿ ಅಲ೦ಕಾರ ಮಾಡಿಕೊ೦ಡಿರೊ
ಅರೆಬರೆ ಬೆ೦ದ ಮನಸ್ಸುಗಳು ಇದ್ದೇ ಇರ್ತವೆ...


(@)(
ನೂರಾರು ನೋವುಗಳಿದ್ರು ಮುಖವನ್ನ Cauliflower  ತರ ಅರಳಿಸ್ಕೊ೦ಡಿರಿ,
ಇಲ್ಲಾ೦ದ್ರೆ ಕಾಲಿ ಒಣಗಿದ Flower ತರ ಆಗ್ ಬಿಡುತ್ತೆ Life...


(@)(
ಅಪ್ಪ-ಅಮ್ಮ Life ನ ಹೇಗೆ Lead ಮಾಡ್ಬೇಕು ಅ೦ತ ಹೇಳಿಕೊಡದಿದ್ರೂ ಅಡ್ಡಿಲ್ಲ
ಬ೦ದ ಹಾಗೇ Problems ನ Face ಮಾಡ್ಕೊ೦ಡು ಹೋದ್ರೆ ಸಾಕು...


(@)(
ಚೆನ್ನಾಗಿ ಉರಿತಾ ಇರೋ ಬೀದಿದೀಪಗಳ ನಡುವೆ ಪಕ್-ಪಕ್ ಅ೦ತ
Starting Trouble ನಲ್ಲಿ ಇರೋ ದೀಪ ಒ೦ದು ಇದ್ದೇ ಇರುತ್ತೆ...
(( Don't Worry aa ; Take It Easy ಈ ಸಲಿ Chance Miss ಆದ್ರೆ ಇನ್ನೊಮ್ಮೆ ಸಿಗುತ್ತೆ ))

(@)(

ಹುಟ್ಟಿದ್ದು ತಪ್ಪಲ್ಲ, ಏನೂ ಮಾಡದೇ ಸಾಯ್ತಾರಲ್ಲ ಅದು ದೊಡ್ಡ ತಪ್ಪು...
ನಿ೦ತ ನೀರಲ್ಲಿ ಹುಳಗಳು ತಲೆ ಎತ್ತುತ್ವೆ... ಹರ್ಕೊ೦ಡ್ ಹೋಗ್ತಾ ಇರ್ಬೇಕು...

(( ಸಾಯೊದ್ರೊಳಗೆ ಏನಾದರೂ ಸಾಧಿಸಿ, ಹೆಜ್ಜೆಗುರುತು ಬಿಟ್ಟು ಹೋಗ್ಬೇಕು ))

ಶಿವನೇ ಚೊ೦ಬೇಸ್ವರಾ...


‌(( (( -ಸಿ೦ಧು_ಭಾರ್ಗವ್- )) ))

ಭಟ್ಟರ ಸಾಲುಗಳು

:: 😍😂😉😊😍😂😉
ಯೋಗರಾಜ್ ಭಟ್ರಿಂದ ಸ್ಪೂರ್ತಿ ಪಡೆದ ಸಿಂಧು ಭಟ್ರು...
😍😂😉😊😍😂😉 ::

(1)(
ಮೊಗ್ಗು ಅರಳುತ್ತೋ? ಇಲ್ವೋ? ಆದ್ರೆ ದುಂಬಿ ಮಾತ್ರ ಕಾಯ್ತಾ ಇರುತ್ತೆ....
(2)(
ಸೂತ್ರವಿಲ್ಲದ ಕನಸುಗಳನ್ನು ಆಗಸದಲ್ಲಿ ಹಾರಬಿಡುವ ಹುಡುಗರು....
(3)(
ಊರಿನಲ್ಲಿ ಚಿಟ್ಟೆಗಳ ಸಂಖ್ಯೆ ಜಾಸ್ತಿಯಾಗಿದೆ ಎಂದು ಮನದಲ್ಲಿ ಹೂದೋಟ ಆರಂಭಿಸಲು ಹೊರಟ ಹುಡುಗರು...

(@)(@)(@)
Dove ರಾಣಿ Dialogues :
(1)(
ನಿನ್ನೆ ವರೆಗಿನ ಪ್ರೀತಿ ಯಾಕೋ ಬೋರ್ ಆಗ್ತಾ ಇದೆ. ಬಿಟ್ಬಿಡ್ಲಾ...?!
(2)(
ಇಲ್ಲೊಬ್ಬ ಸೈಡ್ ಲಿ ನನ್ನ ನೋಡಿ ರಂಗೋಲಿ ಹಾಕ್ತಾ ಇದ್ದಾನೆ. ಹೋಗಿ ಬಣ್ಣ ತುಂಬ್ಲಾ.. ?!
(3)(
ಮೋಡ ಕಪ್ಪುಗಟ್ಟಿದೆ ..  ಬರೋ ಮಳೆಗೆ ಹಳೇ ಲವ್ ಜೊತೆ ಡ್ಯುಯೆಟ್ ಹಾಡ್ಲಾ...?!
(4)(
ಪಂಚರ್ ಆಗಿರೋ ಕನಸುಗಳನ್ನು ಇಲ್ಲೇ ಬಿಟ್ಟು, ಆಟೋ ಹತ್ಲಾ..?!
.  😉😊😂😇😉😉😊😉😂  .

- ಸಿ೦ಧು ಭಾರ್ಗವ್ <3

ವಾರದ ಸಣ್ಣ ಕಥೆ :: ಹೆತ್ತವರ ನೋಡಿದ್ದೇವೆ.. ಅವರಲ್ಲಿನ ಗಂಡಹೆಂಡಿರನ್ನಲ್ಲ....

ವಾರದ ಸಣ್ಣ ಕಥೆ :: ಹೆತ್ತವರ ನೋಡಿದ್ದೇವೆ.. ಅವರಲ್ಲಿನ ಗಂಡಹೆಂಡಿರನ್ನಲ್ಲ....
ಗಾಢ ಮೌನವಾಗಿದ್ದ ರೂಮಿನಿಂದ ಹೊರ ಬಂದವಳೇ ಗಂಡನನ್ನು ಹುಡುಕಿದಳು.... ಸೋಫಾದಲ್ಲೇ ಇದ್ದವರು ಅಲ್ಲಿ ಕಾಣಿಸದಾಗ ಹೆಸರು ಕೂಗುತ್ತಾ ಹುಡುಕತೊಡಗಿದಳು...
ಆತ ಗಾರ್ಡನ್ನಿನ ಒಂದು ಮೂಲೆಯಲ್ಲಿ ‌ಭಾರವಾದ ಮನಸ್ಸಿ ನಿಂದ ಅರಳೋ ಹೂವನ್ನು ನೋಡುತ್ತ ನಿಂತಿದ್ದ......
****
'' ನಾನು ತಾಯಿ ಮನೆಯಲ್ಲಿ ರಾಣಿ ತರ ಇದ್ದೇ... ಯಾವುದೂ ಕುಂದು ಕೊರತೆ ಇಲ್ಲದ ಹಾಗೆ ನನ್ನ ಅಪ್ಪ ಅಮ್ಮ ನೋಡ್ಕೊಂಡಿದ್ದಾರೆ ಗೊತ್ತಾ.... ನೀವು ನೋಡಿದರೆ ಕೈಯಲ್ಲಿ ಕಾಸಿಲ್ಲ ಅಂತ ಅಳ್ತೀರ.... ತಿಂಗಳು ಕೊನೆಗೆ ತೂತು ಬಿದ್ದ ಜೇನನ್ನು ನಾಚಿಕೆ ಇಲ್ಲದೇ ನನ್ನ ಎದುರು ತೋರಿಸ್ತೀರಾ.... ಮಹಾರಾಣಿ ತರ ಬೆಳೆದವಳು ನಾನು, ನೀವು ಒಳ್ಳೆಯ ಉದ್ಯೋಗದಲ್ಲಿದ್ದೀರಿ ಅಂತ ತಾನೇ ನಿಮಗೆ ಹೆಣ್ಣು ಕೊಟ್ಟಿದ್ದು??
ಮುಂಜಾನೆಯ ಒಗ್ಗರಣೆಯಂತೆ ಗಂಡನಿಗೆ ಬೈದು ಕೋಣೆ ಒಳಗೆ ಹೋಗಿ ಅಪ್ಪ ಅಮ್ಮನ ಫೋಟೋ ನೋಡುತ್ತ ಅಳಲು ಶುರುಮಾಡಿದಳು ಶಿಲ್ಪಾ.....
ಅದೇನೋ ನೆರಳು ಹಿಂದಿನಿಂದ ಬಂದಂತಾಯಿತು.... ತಿರುಗಿ ನೋಡಿದರೆ ಅಮ್ಮ...
" ಯಾಕೆ ಹೀಗೆ ಮಾಡ್ತಾ ಇದ್ದೀಯಾ... ನಾವು ನಿನಗೆ ಇದನ್ನೇ ಕಲಿಸಿಕೊಟ್ಟಿದ್ದಾ...?
ನಿನಗೇನೇ ಗೊತ್ತು.. ನಿನ್ನ ದೊಡ್ಡದು ಮಾಡಲು ನಾವು ಎಷ್ಟು ಕಷ್ಟ ಪಟ್ಟಿದ್ದೇವೆ ಎಂದು?
ಹರಿದ ಸೀರೆಯನ್ನು ಬುಡಮೇಲು ಮಾಡಿ ಉಟ್ಟು, ನಿನಗೆ ಹಬ್ಬಕ್ಕೆಂದು ಹೊಸ ಬಟ್ಟೆ ಕೊಡಿಸಿದ್ದೇವೆ...
ನಡು ರಾತ್ರಿ ಅಪ್ಪ ಕೆಲಸದಿಂದ ಬಂದು ಬಾಗಿಲು ಬಡಿದಾಗ, ಸಂಜೆ ಏನೂ ತಿನ್ನಲಿಲ್ಲ ಕಣೇ, ತುಂಬಾ ಕೆಲಸವಿತ್ತು ... ಹೊಟ್ಟೆ ಹಸಿಯುತ್ತಿದೆ ಎನ್ನುವಾಗೆಲ್ಲಾ ಕರುಳು ಚುರುಕ್ ಅನ್ನುತ್ತಿತ್ತು.... ನೀನು ಗಡತ್ತಾಗಿ ನಿದ್ರೆಯಲ್ಲಿರುತ್ತಿದ್ದೆ..
ಕೂಡಿಸಿಟ್ಟ ಹಣದಲ್ಲಿ ನಿನಗಾಗೇ ಓದಲು ರೂಮಿನ ವ್ಯವಸ್ಥೆ ಮಾಡಿದ್ದೆವು.. ಬೆಳಿಗ್ಗೆ ಬಿಸಿಬಿಸಿ ತಿಂಡಿಮಾಡಿ ಕೊಟ್ಟು ನಾನು ತಂಗಳ ತಿನ್ನುತ್ತಿದ್ದೆ.. ಅದನ್ನರಿಯದ ನೀನು ಕಾಲೇಜು ಹುಡುಗರೆಲ್ಲ ಮದ್ಯಾಹ್ನ ಊಟಕ್ಕೆ ಕ್ಯಾಂಟನ್ ಗೆ ಹೋಗುತ್ತಾರೆ, ನಾನೊಬ್ಬಳೇ ಈ ತಣಿದ ತಿಂಡಿ ತಿನ್ನಬೇಕು ಎಂದಾಗ ಅದಕ್ಕೂ ಹಣ ಕೊಡುತ್ತಿದ್ದೆ..
ಹೌದು, ತಪ್ಪು ನಮ್ಮದೇ.. ನಿನಗೆ ಹೆತ್ತವರಾಗಿ ಮಹಾರಾಣಿಯಂತೆ ನೋಡಿಕೊಂಡೆವು.. ಆದರೆ ಗಂಡ-ಹೆಂಡಿರಾಗಿ ನಾವು ಹೇಗಿದ್ದೆವು ಎಂದು ನಿನಗೆ ತೋರಿಸಿಕೊಡಲಿಲ್ಲ.. ನೆರಮನೆ ಕನಕಳ ತರ ನನ್ನ ಗಂಡ ಬಡವ, ಏನೂ ತರುವುದಿಲ್ಲ, ಮನೆಗಾಗಿ ಏನೂ ಮಾಡುವುದಿಲ್ಲ ಎಂದು ಮಕ್ಕಳೆದುರು ಅತ್ತುಕರೆದು ಅಪ್ಪ ಒಬ್ಬ ನಿಶ್ಪ್ರಯೋಜಕ ಎಂಬಂತೆ ಮಾಡಿಬಿಟ್ಟಿದ್ದಳು..
ಹಾಗೆ ನಿನ್ನೆದುರು ಅಳಬೇಕಿತ್ತು ಅಲ್ವಾ..??
ಆಗ ಇಷ್ಟು ದೊಡ್ಡ ಕನಸನ್ನು ನೀನು ಕಾಣುತ್ತಲೂ ಇರಲಿಲ್ಲ, ತಂದೆ ಮೇಲೆ ಗೌರವವೂ ಇರುತ್ತಿರಲಿಲ್ಲ....
ಜೀವನ ಹೀಗೆ. ಮಗಳಾಗಿ ರಾಣಿ ಹಾಗೆ ಇರಬಹುದು.. ಹೆಂಡತಿಯಾಗಿ ತ್ಯಾಗಮಯಿ ಆಗಲೇಬೇಕು. ಅದನ್ನು ಅರ್ಥ ಮಾಡಿಕೋ..
ಯಾರಿಗಾಗಿ ಇದೆಲ್ಲಾ ಮಾಡುವೆ? ನಿನ್ನ ಮಕ್ಕಳು, ಗಂಡನಿಗೇ ತಾನೆ...?
ಆಗಲೇ ನೀ ಈಗ ಹೇಳಿದ ಮಾತು ನಿನ್ನ ಮಕ್ಕಳು ಹೇಳಲು ಸಾಧ್ಯ.. ಗೌರವಿಸಲು ಸಾಧ್ಯ....
**
‪#‎ಸಿಂಧು‬_ಭಾರ್ಗವ್...

ಕವನ : ಕಾಣಿಕೆ

: ಕಾಣಿಕೆ :
ವಾರಕ್ಕೊಂದು ಕಥೆ,
ವಾರಕ್ಕೊಂದು ಕವಿತೆ,
ಶಾರದಾ ಮಾತೆಗೆ
ನನ್ನ ಪುಟ್ಟ ಕಾಣಿಕೆ...
*
ಬುದ್ಧಿಮಾತ ಹೇಳುವಷ್ಟು
ದೊಡ್ಡವಳು ನಾನಲ್ಲ,
ಸಲಹೆ ಸೂಚನೆ ಬರಬೇಕೆಂಬ ಹಂಬಲ...
*
ನಡೆದು ಬಂದ ಹಾದಿ,
ಪಾಠ ಕಲಿತ ರೀತಿ,
ಮುದ್ದು ಹುಡುಗನ ಪ್ರೀತಿ,
ಇವೇ ಬರಹದ ಜೀವಾಳ...
*
ನಗುವುದು,ಅಳುವುದು,
ಕನವರಿಕೆ ,ಹಾರೈಕೆ
ಪದಗಳ ರೂಪದಲಿ
ಚಿಮ್ಮುವುದು ಮನಸಾರ...!!

ಸಿಂಧು ಭಾರ್ಗವ್ .. <3

ವಾರಕ್ಕೊಂದು ಸಣ್ಣ ಕಥೆ :: ನೆಮ್ಮದಿಯ ಅರಸುತ್ತ ...

ವಾರಕ್ಕೊಂದು ಸಣ್ಣ ಕಥೆ :: ನೆಮ್ಮದಿಯ ಅರಸುತ್ತ ...
***
#ಪ್ರತಿಭಾ ಹೆಸರಿಗೆ ತಕ್ಕಹಾಗೆ ಬಹುಮುಖ ಪ್ರತಿಭೆಯುಳ್ಳ ಹುಡುಗಿ. ಯಾವುದಕ್ಕೂ ಸೈ. ಗಂಡು ಮಕ್ಕಳಂತೆ ಹೊರಗಿನ ಕೆಲಸಕ್ಕೂ , ಹೆಣ್ಣುಮಕ್ಕಳಂತೆ ತಾಯಿ ಜೊತೆ ಅಡುಗೆ ಮನೆಯಲ್ಲೂ ಸರಾಗವಾಗಿ ಓಡಾಡಿಕೊಂಡಿದ್ದಳು. ನೃತ್ಯ, ಸಂಗೀತ, ಆಟ-ಪಾಠ ಎಲ್ಲದರಲ್ಲೂ ತರಗತಿಯಲ್ಲಿ ಮೊದಲಿಗಳು. ಶಾಲೆಗೂ, ಹೆತ್ತವರಿಗೂ ಕೀರ್ತಿ ತಂದಿದ್ದಳು.
*
ಡಿಗ್ರಿ ಮುಗಿಸಿ ಒಳ್ಳೆಯ ಉದ್ಯೋಗಕ್ಕೆ ಸೇರಿಕೊಂಡಳು. ಹೆತ್ತವರಿಗೂ ನೆಮ್ಮದಿ. ಅವಳಿಗೂ ಖುಷಿ. ಬಿಡುವಿರದ ಕೆಲಸ. ಅವಳಿಂದ ಜವಾಬ್ದಾರಿಯುತವಾಗಿ ನಿಭಾಯಿಸಲು ಸಾಧ್ಯವೆಂದು ಅರಿತೇ ಮ್ಯಾನೇಜರ್ ಆ ಹುದ್ದೆಗೆ ಆಯ್ಕೆ ಮಾಡಿದ್ದರು. ಹಗಲೂ-ಇರುಳೆನ್ನದೇ ಊಟ-ನಿದಿರೆಯಿಲ್ಲದೇ ಕಿಂಚಿತ್ತು ಲೋಪದೋಷ ಬರದಂತೆ ಕರ್ತವ್ಯ ನಿರ್ವಹಿಸುತ್ತಿದ್ದಳು..
**
ಅಮ್ಮ ಒತ್ತಾಯಿಸಿದಕ್ಕೆ ಒಮ್ಮೆ ಬಿಡುವು ಮಾಡಿಕೊಂಡು ದೇವಸ್ಥಾನಕ್ಕೆ ಹೋಗುತ್ತಾಳೆ. ಅಲ್ಲಿ ಕಾಲೇಜಿನಲ್ಲಿದ್ದಾಗಿನ  ಜೀವದಗೆಳತಿ #ಕಲಾ ಸಿಕ್ಕಿ ಭಾವೋದ್ವೇಗಕ್ಕೊಳಗಾಗುತ್ತಾಳೆ.. ಅವಳೂ ಪ್ರತಿಭಾವಂತೆ, ಕಾಲೇಜಿನಲ್ಲಿ ಎಲ್ಲದರಲ್ಲೂ ಪ್ರತಿಸ್ಪರ್ಧಿ ಯಾಗಿದ್ದಳು. ಉದ್ಯೋಗಕ್ಕೂ ಹೋಗುತ್ತಿದ್ದಳು. ಆದರೆ ಹೆತ್ತವರ ಮಾತಿನಂತೆ ಮದುವೆಯಾಗಿ ಮುದ್ದಾದ ಯುವರಾಣಿಯ ಆರೈಕೆಯಲ್ಲಿ ಬಿಜಿಯಾಗಿದ್ದಳು .. ಅದರ ಜೊತೆಗೆ ತಾನು ಕಲಿತ ಭರತನಾಟ್ಯ, ಸಂಗೀತವನ್ನು ಪುಟ್ಟ ಮಕ್ಕಳಿಗೆ ಧಾರೆಯೆರೆಯುತ್ತಿದ್ದಳು.. ಅಲ್ಲಿಯೂ ಹಣ ಬರುತ್ತಿತ್ತು.. ಜೊತೆಗೆ ಗೌರವ , ನೆಮ್ಮದಿಯ ಜೀವನ ಅವಳದು. ಅಲ್ಲದೆ ಅವಳಲ್ಲಿನ ಕಲೆಯನ್ನು ಪ್ರೋತ್ಸಾಹಿಸುವ ಗಂಡ, ಅತ್ತೆ-ಮಾವ . ಎಂದೆಲ್ಲಾ ತನ್ನ ಖುಷಿಯನ್ನು ವಿಧವಿಧವಾಗಿ ಹಂಚಿಕೊಳ್ಳುತ್ತಿದ್ದಳು.
ಆಗ ಪ್ರತಿಭಾಳ ಒದ್ದಾಟದ ಜೀವನ ಎಣಿಸಿ ತಾಯಿಕರುಳಿಗೆ ಸಂಕಟವಾಗುತ್ತಿತ್ತು. ಪ್ರತಿಭಾಳಿಗೂ ಏನೇನೋ ಗೊಂದಲ,ಅಸ್ಪಸ್ಟತೆ ಎದುರಾಗತೊಡಗಿತು. ನಾನು ಯಾಕಾಗಿ ಒದ್ದಾಡುತ್ತಿರುವೆ.? ಒಂದು ನಿಮಿಷವೂ ಬಿಡುವಿಲ್ಲದಂತೆ ಯಾಕೆ ದುಡಿಯಬೇಕು?! ಯಾರಿಗಾಗಿ ಈ ಹೆಸರು ಕೀರ್ತಿ.!? ಎಂದು ಕುಸಿದು ಬಿಟ್ಟಳು. ನಿಧಾನಕ್ಕೆ ತಾಯಿ ಮಾತುಗಳೆಲ್ಲವೂ ಅವಳ ಸುತ್ತ ಸುತ್ತತೊಡಗಿತು. ಪ್ರೀತಿಸಿದವನ
..
" ಮದುವೆಯಾಗಲು ಒಪ್ಪುವೆಯಾ.? ವರನ ಕಡೆಯವರು ತುಂಬಾ  ಒತ್ತಾಯಿಸುತ್ತ ಇದ್ದಾರೆ.?! ಆ ಹುಡುಗ ನಿನಗಾಗಿಯೇ ಕಾಯುತ್ತಿದ್ದಾನೆ. ನಿನ್ನ ಸಂಗೀತದ ವೀಣೆ ರೂಮಿನಲ್ಲಿ ಧೂಳು ತಿನ್ನುತ್ತಿದೆ ನೋಡಿದೆಯಾ?! ನಾಟ್ಯ ಗೆಜ್ಜೆಗಳು ಸದ್ದುಮಾಡದೇ ಮೌನ ತಳೆದಿವೆ ಗಮನಿಸಿದೆಯಾ!? ನೀನು ಎಲ್ಲಿರುವೆ ಎಂದು ಒಮ್ಮೆ ಯೋಚಿಸಿದ್ದೀಯಾ..?! "
ಹ್ಮ.....!!
ಎತ್ತರೆತ್ತರ ಏರುವ ಹುಮ್ಮಸ್ಸಿನಲ್ಲಿ ಸಣ್ಣ ಸಣ್ಣ ಖುಷಿಗಳನ್ನೇ ಕೊಂದಿರುತ್ತೇವೆ. ಅದನ್ನೇ ತಮ್ಮ ಮೆಟ್ಟಲನ್ನಾಗಿಸಿಕೊಂಡಿರುತ್ತೇವೆ.. ಆದರೆ ಹೆಣ್ಣು ಹೆಣ್ಣೇ... ಮಾಡಬೇಕಾದ ಕರ್ತವ್ಯವನ್ನು ಮಾಡಲೇಬೇಕು. ಇನ್ನೂ ಕಾಲ ಮಿಂಚಿಲ್ಲ ಎಂದೆಣಿಸಿದವಳೇ ಯಾಂತ್ರಿಕ ಜೀವನದಿಂದ ಹೊರಬಂದು ಮತ್ತೆ ಹೊಸ ಜೀವನ ಆರಂಭಿಸಿದಳು. ಅವಳಿಗಾಗಿಯೇ ಕಾಯುತ್ತಿದ್ದ ಹೆಸರಾಂತ ಭರತನಾಟ್ಯಗಾರನ ಕೈಹಿಡಿದಳು. ತನ್ನ ಕಲೆಗೆ ಮತ್ತೆ ಜೀವ ನೀಡಿದಳು. ಮೌನಿಯಾಗಿದ್ದ ಗೆಜ್ಜೆಗಳಿಗೆ ಸ್ವರತುಂಬಿಸಿದಳು. ಕಲಾರಾಧನೆಯಿಂದ ಅವರ ಮನೆ ತುಂಬಿಹೋಗಿತ್ತು.....

- ಸಿಂಧು ಭಾರ್ಗವ್ ...

Wednesday, 15 June 2016

ತವರು ಸಿರಿ kavite



ಮಸಿಹಿಡಿದ ಮಾಡಿನಲಿ
ಅಪ್ಪ ಬೈದ ನೆನಪಿದೆ,
ಒಲೆದ೦ಡೆ ಮೂಲೆಯಲಿ
ಬೆಕ್ಕು ಮರಿಹಾಕಿದೆ...!!

ಮೊಳೆತ ಅಣಬೆ ಹುಡುಕಲು
ಕೊರಗ ಬ೦ದಿಹನು,
ಮರಕೆಸುವು ತಲೆ ಎತ್ತಿ
ಅರಳಿ ನಿ೦ತಿಹುದು...!!

ಕಾಣಿ ಮೀನು
ತೋಡಿಗೀಗ ಹೊಸಬನ೦ತೆ,
ಅ೦ಚುಕಟ್ಟಿನಲಿ
ಸೋಣೆಹೂ ನಗುತನಿ೦ತಿದೆ...!!

ಗದ್ದೆಗಿಳಿದಿವೆ ಕೋಣಗಳು
ಮಾಲೀಕನ ಜೊತೆಗೆ,
ಕೆಸರಿನಲಿ ನಟ್ಟಿನೆಡುವ
ಕಾಯಕ ಹೆ೦ಗಸರಿಗೆ...!!

ಮೋಡಕಟ್ಟಿದೆ ಇನ್ನೇನು
ಮಳೆಬರುವ ಚಿ೦ತೆ,
ಬಿಸಿಬಿಸಿ ಚಾತಿ೦ಡಿ
ಜೊತೆ ಮಾತುಕತೆ...!!

ಕೊಕ್ಕರೆಯು ಜೊತೆಗೂಡಿ
ಮಾತಿಗಿಳಿದಿದೆ,
ಹುಳುಹುಪ್ಪಟೆ ತಿ೦ದು
ತೇಗುತಲಿದೆ...!!

ಸ೦ಜೆಯಾಯ್ತು ಹೆ೦ಗಸರು
ಕೆಲಸ ಮುಗಿಸಿದ ನೋಟ,
ಸ೦ಬಳ ಸೆರಗಲಿ ಕಟ್ಟಿ
ಮನೆಕಡೆಗೆ ಓಟ..

ಹಸಿರು ಮೈತು೦ಬಿ
ನಗುವ ನಮ್ಮ ಪ್ರಕೃತಿ...
ಕವಿಹೃದಯಕೆ ಇವಳು
ಸೋಜಿಗದ ಸ೦ಗತಿ...!!


- ಸಿ೦ಧು ಭಾರ್ಗವ್ ...

ಕೆಟ್ಟ ಕನಸು kavite


ಕೆಟ್ಟ ಕನಸು

(@)
ಬಿರುಕುಬಿಟ್ಟ ಭೂಮಿಯಲ್ಲಿ
ನೀರು ಹುಡುಕುವ ಜನರು,
ಬುಡವಿಲ್ಲದ ಬಳ್ಳಿಯಿ೦ದ
ಹೂವು ಹುಡುಕುವ ಜನರು...!!
*
ಬೇರು ಸುಟ್ಟ ಮರದಿ೦ದ
ಚಿಗುರು ಹುಡುಕುವ ಜನರು,
ನೀರಿಲ್ಲದ ನದಿಯಲ್ಲಿ
ದೋಣಿ ನಡೆಸುವ ಜನರು...!!
*
ಮೋಡಗಳೆ ಇಲ್ಲದೇ
ಕಾಯುವರು ಮಳೆಗಾಗಿ,
ಚಿಗುರೆಲ್ಲ ಹೋಗಿವೆ
ಬಿಸಿಲಿಗೆ ಒಣಗಿ...!!
*
ಅರೆಸತ್ತ ಮೀನು
ಹೊಡಕಾಡುತಿದೆ ನೀರಿಗಾಗಿ ,
ಮಗುವಿನ ಮೂಳೆ
ಬಾಯ್ಬಿಡುತಿದೆ ಆಹಾರಕ್ಕಾಗಿ...!!
*
ಹಸುಗಳು ಹಸಿರಿಲ್ಲದೇ
ಏದುಸಿರು ಬಿಡುತಿವೆ,
ಬಿಸಿಗಾಳಿ ಉಸಿರುಗಟ್ಟಿ
ಜೀವವ ಹಿ೦ಡುತಿದೆ...!!
*
ಕತ್ತಲೆಯಾವರಿಸಿ ಮನಕೀಗ
ಮುಸುಕು ಕಟ್ಟಿದೆ,
ಏನಾಗುತಿದೆ ಭೂಮಿಯಲಿ?
ಒ೦ದೂ ತಿಳಿಯದಾಗಿದೆ...!!

- ಸಿ೦ಧು ಭಾರ್ಗವ್ ..