Thursday, 9 January 2020

ಕನ್ನಡ ಸಾಹಿತ್ಯ ಮಕ್ಕಳ ಪದ್ಯಗಳ ಸಂಗ್ರಹ 2020

ಮಕ್ಕಳ ಸಾಹಿತ್ಯ ಮಕ್ಕಳ ಪದ್ಯಗಳ ಸಂಗ್ರಹ.
ಒಂದನೇ ತರಗತಿ ಮತ್ತು ಎರಡನೇ ತರಗತಿಯ ಸವಿಗನ್ನಡ - ಕರ್ನಾಟಕ ಪಠ್ಯ ಪುಸ್ತಕ ಸಂಘ(ರಿ.)
























Wednesday, 8 January 2020

ಕೋಟ ಶಿವರಾಮ ಕಾರಂತರು ನೆನಪಿಗಾಗಿ ಕವಿತೆ ಬರೆದೆನು

ಕೋಟ ಶಿವರಾಮ ಕಾರಂತರ ನೆನಪಿನಲ್ಲಿ ಈ ಕವಿತೆ ಅರ್ಪಣೆ.

Images source:- Google Images

ಕವಿತೆಯ ಶೀರ್ಷಿಕೆ: ಕಾರಂತಜ್ಜನ ನೆನಪಿನಲ್ಲಿ...

ಅಲೆಗಳ‌ ಜೊತೆಯಲಿ ಆಡಿಬೆಳೆದ
ಕಡಲ ತೀರದ ಭಾರ್ಗವ
ಬರಹ ರೂಪಕೆ ಜ್ಞಾನಪೀಠವ
ತಂದು ಕೊಟ್ಟ ಗೌರವ

ನೋವು ನಲಿವಿಗೆ ಕಡಲೇ
ಉತ್ತರ ನೀಡಿ ಗೆಳೆಯನಾಗಿದೆ
ಹೊಸತು ಹುರುಪು ಮೂಡಿ
ಬರಲು ಕಡಲು ಕಾರಣವಾಗಿದೆ

ಪದಗಳನ್ನೇ ಅಸ್ತ್ರ ಮಾಡಿ
ದೇಶಕಾಗಿ ಸಿಡಿದಿದ್ದರು
ಕ್ರಾಂತಿಕಾರಿ ಕವನಗಳಿಂದ
ಜನರನ್ನು ಎಬ್ಬಿಸಿದ್ದರು

ಸ್ವಾತಂತ್ರ್ಯ ನಮ್ಮ ಹಕ್ಕು
ಬನ್ನಿ ಗೆಳೆಯರೇ ಎಂದರು
ಉಪವಾಸವ ಮಾಡಿ
ಗಾಂಧಿಯವರಿಗೆ ಹೆಗಲಾದರು

ಮೂಕಜ್ಜಿಯ ಕನಸಿನಲ್ಲಿ
ತನ್ನ ಕನಸನು ಬಿತ್ತುತ
ಚೋಮನ ದುಡಿಯ ಬಡಿದು
ಸ್ಥಾನಮಾನಕ್ಕಾಗಿ ಗುಡುಗಿದರು

ಹುಚ್ಚು ಮನಸಿನ ಹತ್ತು ಮುಖಗಳು
ಓದುಗನಲಿ ಅಚ್ಚಾಗಿದೆ
ದೇವದೂತ ಬಂದು ಈಗ
ಮನದ ದನಿಯ ಕೇಳದೇ??

ನೇರನೇರ ನುಡಿದರೇನೆ
ಜನರ ಮೈಯು ಉರಿವುದು
ಜಾತಿ ವಿಜಾತಿ ಎಂಬೆ ಏತಕೀ ಜೀವ
ಮರಳಿ ಮಣ್ಣಿಗೆ ಹೋಗುವುದು

"ವಸಂತ"ದಲ್ಲಿ ಮೂಡಿ ಬಂದ
ಕಂತುಕಂತಿನ ಕಥೆಗಳು
ಕಾದಂಬರಿ ರೂಪ ಪಡೆದು
ಇಂದು ಅಮರವಾದವು

ಯಕ್ಷಲೋಕವ ಪ್ರೇಕ್ಷಕನೆದುರು
ತೆರೆದಿಟ್ಟ ಕಲೆಗಾರನು
ನಟನೆ, ನಾಟ್ಯ ಸಂಭಾಷಣೆಗೆ
ಹೆಸರಾದ ಗಂಡು ಮೆಟ್ಟಿದ ಕಲೆಯಿದು

ಉತ್ತರಕನ್ನಡದಲ್ಲಿ ಚಿರುಗಿದ ಕನಸೊಂದು
ಬೆಟ್ಟದ ಜೀವವಾಗಿ ಎಲ್ಲರ ಸೆಳೆಯಿತಂದು
ಹಸಿದ ಆಡು ಮುಟ್ಟದ ಸೊಪ್ಪಿರಲಿಲ್ಲ
ಕಾರಂತಜ್ಜರು ಅರಿಯದ ಸಾಹಿತ್ಯ ಪ್ರಕಾರಗಳಿಲ್ಲ

ಸನ್ಮಾನ, ಪ್ರಶಸ್ತಿ ಪುರಸ್ಕಾರಗಳದ್ದೇ ಹೊಳೆಹರಿಯಿತು
ಕಡಲ ತೀರದ ಭಾರ್ಗವನಿಗೆ ಸಾಷ್ಟಾಂಗ ನಮನವೆಂದಿತು

ರಚನೆ: ಸಿಂಧು ಭಾರ್ಗವ್ . ಬೆಂಗಳೂರು






My Articles on newspaper And Magazine 2020

ಸ್ನೇಹಿತರೇ,
ನಾನು ಬರೆದ ಲೇಖನ ಕಥೆ ಕವನಗಳ ಸಮಗ್ರ ಸಂಗ್ರಹ. ಯಾವುದೆಲ್ಲ ದಿನಪತ್ರಿಕೆಯಲ್ಲಿ ಮತ್ತು  ಮ್ಯಾಗಜೀನ್ ನಲ್ಲಿ ನನ್ನ ಬರಹಗಳು ಬಂದಿವೆ ಎಂದು ಸಂಗ್ರಹಿಸಿಯಿಟ್ಟಿರುವೆನು. ೨೦೨೦ರ ಹೊಸ ಯೋಜನೆಯಿದು.
೧)
ವಾರ್ತಾಭಾರತಿ ದಿನಪತ್ರಿಕೆಯ ಸುಗ್ಗಿ ಸಾಪ್ತಾಹಿಕ ಪುರವಣಿಯಲ್ಲಿ ಮಕ್ಕಳ ಕಥೆ ಪ್ರಕಟವಾಯಿತು. ವರ್ಷದ ಆರಂಭ ವಾರ್ತಾಭಾರತಿಯಿಂದ ಪ್ರಾರಂಭವಾಯಿತು.
ದಿನಾಂಕ ೦೫-೦೧-೨೦೨೦ ರವಿವಾರ.

Monday, 16 December 2019

ಭೂಮಿ ಪ್ರತಿಷ್ಠಾನ ಧಾರವಾಡ ಪುಸ್ತಕ ಬಿಡುಗಡೆ ಕಾರ್ಯಕ್ರಮ

🌿🌿🌿🌿🌿🌿🌿🌿🌿🌿

" ಭೂಮಿ ಪ್ರತಿಷ್ಠಾನ " ದ ಎಲ್ಲ ಸಹೄದಯ ಸಾಹಿತ್ಯ ಮನಸ್ಸುಗಳಿಗೂ ನಮಸ್ಕಾರಗಳು! ನಿನ್ನೆಯ ಡಿಸೆಂಬರ್ ೧೫-೨೦೧೯ ರವಿವಾರದಂದು ನಡೆದ ಕಾರ್ಯಕ್ರಮವನ್ನು ನಾನು ತಪ್ಪಿಸಿಕೊಂಡಿದ್ದರೆ ಬಹುಶಃ ಜೀವನದ ಬಹು ದೊಡ್ಡ ಸುಸಮಯವನ್ನು ಕಳೆದುಕೊಂಡಂತಾಗುತ್ತಿತ್ತು!
🌿 ಕಾರ್ಯಕ್ರಮ ತುಂಬಾ ಅಚ್ಚುಕಟ್ಟಾಗಿ ನಡೆಯಿತು!
🌿 ಅನುಭವಿಗಳಿಂದ, ಪ್ರಾಜ್ಞಃರಿಂದ ನಡೆಸಿಕೊಟ್ಟ ಉಪನ್ಯಾಸಗಳಂತೂ ಸದಾ ಮನನೀಯ !
🌿 ಭೂಮಿ ಪ್ರತಿಷ್ಠಾನದ ಎಲ್ಲ ಸದಸ್ಯರೂ ಸಹೄದಯತೆಯಿಂದ ನಡೆದುಕೊಂಡರು ಮತ್ತು ಕಾರ್ಯಕ್ರಮದ ಅಚ್ಚುಕಟ್ಟಿಗಾಗಿ ಶ್ರಮಿಸಿದ್ದಾರೆ.
🌿 ಆತಿಥ್ಯ ಕೂಡ ಚೆನ್ನಾಗಿತ್ತು.
🌿 ಅನುಭವಿಗಳಂತೆ ನೀವೆಲ್ಲ ಬಹಳ ಸುಂದರವಾಗಿ, ಅಚ್ಚುಕಟ್ಟಾಗಿ, ಸ್ಮರಣೀಯವಾಗಿ ಕಾರ್ಯಕ್ರಮ ನಡೆಸಿ ಕೊಟ್ಟಿರಿ!
🌿ಯಾರಿಗೂ ಯಾವುದೇ ರೀತಿಯ ಅಸಹನೆಯುಂಟಾಗದಂತೆ ನಡೆಸಿದಿರಿ.
🌿 ಪ್ರಭುದ್ಧ ಭಾಷಣಗಳು ಮನಸೆಳೆದವು.
🌿 " ಮಲ್ಲಿಗೆಯ ಮಾಲೆ" ಕವನ ಸಂಕಲನದ ಹೊರ ವಿನ್ಯಾಸ, ಒಳಗಿನ ತಿರುಳು , ಉತ್ತಮ ಮಟ್ಟದ ಕಾಗದ ಸೂಪರ್!
🌿 ನಿಮ್ಮ ಈ ಕಾರ್ಯಕ್ರಮ ಬಹಳಷ್ಟು ಜನರಿಗೆ ಅನುಕರಣೀಯವಾಗಿತ್ತು.
ಈ ನಿಮ್ಮ ಶ್ರಮಕ್ಕೆ, ಸಾಧನೆಗೆ ನನ್ನ ಮನದಾಳದ ಹಾರೈಕೆಗಳು🙏💐
🍁🍀 ಮುಂಜಾನೆಯಿಂದ ರಾತ್ರಿ ತನಕ ಕಾರ್ಯಕ್ರಮದ ಜವಾಬ್ದಾರಿ, ಹಾಗೆಯೇ ಕವನವನ್ನು ಕಳುಹಿಸಲು ಆಹ್ವಾನ ನೀಡಿದ ದಿನದಿಂದ ಮುದ್ರಣ ಪುಸ್ತಕ ಕೈಗೆ ಬರುವ ತನಕವೂ ನುನ್ನೆಯ ಕಾರ್ಯಕ್ರಮ ಮುಗಿಯುವ ತನಕ ಶ್ರಮಿಸಿದ ಎಲ್ಕರಿಗೂ ಅಭಿನಂದನೆಗಳ ಅರ್ಪಿಸುವೆನು.
🍁🍀 ನನಗೆ ಕವನ ಸ್ಪರ್ಧೆಯಲ್ಲಿ ಎರಡನೇ ಬಹುಮಾನ ದೊರೆತಿದ್ದು ಅಚ್ಚರಿ ಅಲ್ಲದೇ ಸಂತಸದ ವಿಷಯವಾಗಿತ್ತು. ಧಾರವಾಡಕ್ಕೆ ಬೇಂದ್ರೆ ಅಜ್ಜನ ಊರಿಗೆ ಬಂದದ್ದು ತುಂಬಾ ಸಂತೋಷ‌ವಾಯಿತು. ಭೂಮಿ ಕಾವ್ಯ ಪುರಸ್ಕಾರ ಪಡೆದ ಕ್ಷಣ ಎಂದೂ ಮರೆಯಲಾಗದು.

ಒಳ್ಳೆಯ ಕಾರ್ಯಕ್ರಮ ಹಲವಾರು ವರ್ಷ ಸದಾ ನೆನಪಿನಲ್ಲಿ ಉಳಿಯುವಂತಹುದು, ಮನಸ್ಸಿನಿಂದ ಮರೆಯಾಗಲಾರದಂತಹುದು!
ವಿ.ಸೂ:
( ಇಲ್ಲಿನ ಮಾಹಿತಿ ಮತ್ತು ಕೆಲವು ಚಿತ್ರಕೃಪೆಗಳು ವಾಟ್ಸ್ ಆಪ್ ಗ್ರೂಪಿನಿಂದ ಮತ್ತು ಭೂಮಿ ಪ್ರತಿಷ್ಠಾನ ಧಾರವಾಡದಿಂದ ವಂದನೆಗಳು💐)
💐💐💐💐💐💐💐💐💐






















💐ಶುಭಹಾರೈಕೆಗಳು💐


Monday, 2 December 2019

Warm welcome to December



ಸ್ನೇಹಿತರೇ,
ಶ್ರೀಮತಿ ನಂದಾ ಪ್ರೇಮಕುಮಾರ್ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ ಪತ್ರಲೇಖನಗಳ ಸಂಕಲನ "ಹೆತ್ತವರಿಗೊಂದು ಪತ್ರ" ನಿನ್ನೆಯ ದಿನ ಅಂದರೆ ಡಿಸೆಂಬರ್ ೦೧ ರಂದು ಸಿರಿಗನ್ನಡ ವೇದಿಕೆ ಮಹಿಳಾಘಟಕ ಶಿವಮೊಗ್ಗ ದಲ್ಲಿ ಲೋಕಾರ್ಪಣೆಗೊಂಡಿತು. ಅದರಲ್ಲಿ ನಾನು ಬರೆದ ಲೇಖನ "-ಪಿತಾಜಿಗೊಂದು ಪತ್ರ" ಕೂಡ ಪ್ರಕಟವಾಗಿದೆ ಎನ್ನಲು ಸಂತೋಷವಾಗುತ್ತಿದೆ. ಅವಕಾಶ ನೀಡಿದ ಸಂಪಾದಕರಿಗೆ ವಂದನೆಗಳನ್ನು ತಿಳಿಸುವೆನು. ಸಿಂಧು ಭಾರ್ಗವ್ | ಬೆಂಗಳೂರು #thanksgiving
#ಹೆತ್ತವರಿಗೊಂದುಪತ್ರ #ಲೇಖನಸಂಕಲನ #ಸಿರಿಗನ್ನಡವೇದಿಕೆ #ಶಿವಮೊಗ್ಗ  #Sindhubhargavquotes #sindhubhargav #kannadaarticle #kannadastories #kannadapoems #shivmoga #sagara #decembermonth of book #kannadaliterature 
ಕೆಲವು ಚಿತ್ರಪಟಗಳು ನೋಡಿರಿ.
ಧನ್ಯವಾದಗಳು💐
**(@)**
**
*










Tuesday, 4 June 2019

Navaparva Foundation_ನವಪರ್ವ ಫೌಂಡೇಷನ್ ಬೆಂಗಳೂರು

*ನವ ಪರ್ವ ಫೌಂಡೇಷನ್ನಿನ ಗುರಿ ಮತ್ತು ಉದ್ದೇಶಗಳು.*

೧) ನವ ಪರ್ವ ಫೌಂಡೇಷನ್  ವತಿಯಿಂದ ವಿಧ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸುವ ಯೋಜನೆಯಿದೆ.

೨) ನವ ಪರ್ವ ಫೌಂಡೇಷನ್ ವತಿಯಿಂದ ಪ್ರಾಥಮಿಕ ಶಾಲಾ ಮಕ್ಕಳಿಂದ ಹಿಡಿದು ಇಂಜಿನಿಯರಿಂಗ್ ಕಾಲೇಜನಲ್ಲಿ ಶಿಕ್ಷಣ ಪಡೆಯುತ್ತಿರುವ ವಿಧ್ಯಾರ್ಥಿಗಳ ವರೆಗೂ ಸಾಹಿತ್ಯದಲ್ಲಿ ಆಸಕ್ತಿ, ಕವನ ಸ್ಪರ್ಧೆ, ಕವನ ವಾಚನ, ಅಲ್ಲದೇ ಕಥೆ, ಕವನ, ಲೇಖನಗಳನ್ನು ಹೇಗೆ ಬರೆಯಬಹುದು ಎಂಬ ಸಣ್ಣ ಕಾರ್ಯಾಗಾರವನ್ನು ನಡೆಸುವ ಯೋಜನೆಯಿದೆ. ಹಾಗೆ ಭಾಗವಹಿಸಿದ ವಿಧ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡುವೆವು.

೩) ಹಾಗೆಯೇ ತಿಂಗಳಿಗೊಮ್ಮೆ ಕವನವಾಚನ ,ಕವಿಗೋಷ್ಠಿ ನಡೆಸುವ ಮೂಲಕ ವಿಧ್ಯಾರ್ಥಿಗಳು ಸಾಹಿತ್ಯದ ಕಡೆಗೂ ಒಲವು ತೋರಿಸುವ ಪ್ರಯತ್ನ ನಮ್ಮದಾಗಿದೆ.

೪) ಅಲ್ಲದೇ ಆನ್ಲೈನ್ ಕವಿಗೋಷ್ಠಿ, ಹಾಗೂ ರಾಜ್ಯ ಮಟ್ಟದ ಕವನ ಸ್ಪರ್ಧೆ ನಡೆಸಿ ಬಹುಮಾನ, ಪ್ರಶಸ್ತಿ ಪತ್ರ ನೀಡಿ ಗೌರವಿಸಬೇಕೆಂದಿದ್ದೇವೆ. ಮೆಚ್ಚುಗೆ ಪಡೆದ ಕವನಗಳಿಗೆ ನೆನಪಿನ ಕಾಣಿಕೆ, ಅಭಿನಂದನಾ ಪತ್ರ ನೀಡಿ ಗೌರವಿಸುವೆವು.

೫) ಹಾಗೆಯೇ ಸಾಹಿತ್ಯೇತರ ಚಟುವಟಿಕೆಗಳಾಗಿ ಅನಾಥಾಶ್ರಮಕ್ಕೆ , ವೃದ್ಧಾಶ್ರಮಕ್ಕೆ ಬೇಟಿ ನೀಡಿ ಅಲ್ಲಿಯವರಿಗೆ ನಮ್ಮ ಕೈಲಾದ ಸಹಾಯ ಮಾಡಬೇಕೆಂದಿದ್ದೇವೆ. (ಜನ್ಮದಿನವನ್ನು ಆಚರಿಸಿಕೊಳ್ಳುವುದು, ಹಣ್ಣಹಂಪಲು, ಅಕ್ಕಿ- ಬೇಳೆ ವಿತರಣೆ)

೬) ಪರಿಸರದ ಬಗೆಗೆ ಕಾಳಜಿ ವಹಿಸಿ ಶಾಲೆಗಳಿಗೆ ಭೇಟಿ ನೀಡಿ ಗಿಡ ನೆಟ್ಟು ಹಾಗೆ ಅದರ ಬಗ್ಗೆ ಜಾಗೃತಿ ಮೂಡಿಸುವ ಯೋಜನೆಯಿದೆ.

೭) ಮಕ್ಕಳ ಕಥಾ ಪುಸ್ತಕ, ಹಾಗೂ ಶಿಶುಗೀತೆಯ ಪುಸ್ತಕವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರ್ಥಮಿಕ ಶಾಲೆಗೆ ಭೇಟಿ ಮಾಡಿ ಆದಷ್ಟು ಶಾಲಾ ಪುಟ್ಟ ಮಕ್ಕಳಿಗೆ ನೀಡಿ ಓದಿನಲ್ಲಿ ಆಸಕ್ತಿ ಮೂಡಿಸುವ ಹಾಗೆ ಮಾಡುವುದು.

೮)  ಪರಿಸರ ಸಂರಕ್ಷಣೆಯ ಬಗೆಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುವುದು.ಕಿರುಚಿತ್ರಗಳನ್ನು ತೆಗೆದು (short film) ಶಾಲೆಗೆ ಭೇಟಿ ನೀಡಿ ಅದನ್ನು ಪ್ರದರ್ಶಿಸುವುದು.

೯) ಮಕ್ಕಳಲ್ಲಿ ಚಿತ್ರಕಲೆ, ಭಾಷಣ ಮಾಡುವ ಕಲೆ, ನಾಟಕಗಳಲ್ಲಿ ಭಾಗವಹಿಸಲು ಸಣ್ಣಪುಟ್ಟ ಕಾರ್ಯಾಗಾರವನ್ನು ನಡೆಸುವುದು.

೧೦) ಜೀವ ವೈವಿಧ್ಯಮಯ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವುದು.

೧೧) ಟ್ರಸ್ಟ್ ನ  ವತಿಯಿಂದ ಪರಿಸರ ಮಾಲಿನ್ಯ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು. (ವೀಡಿಯೋ ಮೂಲಕ‌.)

೧೨) ಮಳೆ ನೀರಿನ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಹಾಗೂ ಪೋಷಕ ರಲ್ಲಿ ಅರಿವು ಮೂಡಿಸುವುದು.

೧೩) ಮಕ್ಕಳ ಸಾಹಿತ್ಯ ಸಮ್ಮೇಳನದ ಮೂಲಕ ಸಾಹಿತ್ಯ ಅಭಿರುಚಿಯನ್ನು ಹೆಚ್ಚಿಸುವ ಪ್ರಯತ್ನ ಮಾಡುವುದು.

೧೪) ಹಾಗೆಯೇ ಮುಂಬರುವ ವರುಷಗಳಲ್ಲಿ ನಮ್ಮದೆ ಸಂಸ್ಥೆಯಡಿಯಲ್ಲಿ ಶೈಕ್ಷಣಿಕ ಸಂಸ್ಥೆಯನ್ನು ತೆರೆಯುವ ಯೋಜನೆಯಿದೆ.

೧೫) ವಿಧ್ಯಾರ್ಥಿಗಳಿಂದ  ಕಥೆ, ಕವನ ಲೇಖನಗಳನ್ನು ಆಹ್ವಾನಿಸಿ ಕೃತಿರೂಪ ಕೊಟ್ಟು ಲೋಕಾರ್ಪಣೆ ಮಾಡುವ ಯೋಜನೆಯಿದೆ.

*✍ ಮುರುಳೀಧರ್ ಕೆ.ಎಸ್*
*ಅಧ್ಯಕ್ಷರು. (ನವ ಪರ್ವ ಫೌಂಡೇಷನ್‌)*