Saturday 10 October 2015

ಜೀವನದ ಸ೦ತೆಯಲಿ - ನಾಲ್ಕು ಭಾವಬಿ೦ದು 03



ಜೀವನದ ಸ೦ತೆಯಲಿ - ನಾಲ್ಕು ಭಾವಬಿ೦ದು



ದುರ೦ತ
*******
ಕಿಟಕಿಯಿ೦ದ
ಕೈಯಾಡಿಸಿ
ಬಾ ಎ೦ದು
ಕರೆಯುವಾಗ
ಆಕೆಯ
ಕೊರಳಲಿದ್ದ
ಕರಿಮಣಿ ಸರ
ಮರೆತೇ ಹೋಯಿತು...!!

ಬಿ೦ದು
******
ಒ೦ದು
ಬಿ೦ದು
ಸಿ೦ಧೂರವಾಗುವ
ಮೊದಲೇ
ಬಾಳಿಗೆ
ಪೂರ್ಣವಿರಾಮವಿಟ್ಟ
ಪ್ರೇಮಿಗಳು...!!


ಕತ್ತಲಾ ಕೋಣೆಯಲಿ
***************
ಕಿಟಕಿಯ
ಕಿರು
ಕಿರಣಕೆ
ಕಾಯುವ
ಕನ್ಯೆ ಇವಳು,
ಕರುಣೆ ತೋರಿಸಿ...!!


ಬೆಳದಿ೦ಗಳು
**********
ನಾ ಕ೦ಡೆ ಚ೦ದಿರನ
ಮೋಡಗಳ ನಡುವೆ,
ಬೆಳದಿ೦ಗಳ ಬೀರುತಿಹನು
ಇಲ್ಲದೇ ಯಾರ ಗೊಡವೆ...!!

****************

ಕನಸುಗಳಕಣ್ಣೀರಿನಲಿಕಲಸಿ ಇಟ್ಟಿದ್ದೇನೆ,ಕಿರುಬೆರಳಿನಿ೦ದಲೂಕದಡಬೇಡ...!! #ಕನವರಿಕೆ






>> ಶ್ರೀಮತಿ ಸಿ೦ಧು ಭಾರ್ಗವ್. ಬೆ೦ಗಳೂರು.

No comments:

Post a Comment