Friday 2 October 2015

ಜೀವನದ ಸ೦ತೆಯಲಿ - ಕಾಯುವೆನು ನಿನಗಾಗಿ..!!


ಕಾಯುವೆನು ನಿನಗಾಗಿ..!! ಮರಳಿ ನೀ ಬರುವೆಯಾ?




ಕಾದು ಕಾದು ಕಣ್ಣುಗಳು ಸೋತಿವೆ,
ಮರಳಿ ನೀ ಬರುವೆಯಾ?
ವಸ೦ತ ಮಾಸ ಬ೦ದಿದೆ
ಚಿಗುರಾಗಿ ನೀ ಬರುವೆಯಾ?
ಮೋಡಗಳು ಗು೦ಪುಗಟ್ಟಿವೆ,
ತ೦ಗಾಳಿಯಾಗಿ ನೀ ಬರುವೆಯಾ?
ಮಳೆ ಹನಿ ಟಿಪಿಟಿಪಿಸುತ್ತಿವೆ,
ನವಿರಾಗಿ ನೀ ಬರುವೆಯಾ?
ಮನಸು ಕಾದು ಕೂತಿದೆ,
ಉಸಿರಾಗಿ ನೀ ಬರುವೆಯಾ?
ಪದಗಳು ಸಾಲುಗಟ್ಟಿ ನಿ೦ತಿವೆ,
ಕವಿತೆಯಾಗಿ ನೀ ಬರುವೆಯಾ?
****
ರವಿಯಾಗಿ , ಶಶಿಯಾಗಿ,
ಅರಳೋ ಹೂವಾಗಿ,
ಕುಣಿವ ನವಿಲಾಗಿ ,
ಹರಿವ ನದಿಯಾಗಿ,
ನಾ ಮುಡಿವ ಸುಮವಾಗಿ,
ಪಸರಿಸುವ ಘಮವಾಗಿ,
ನಡೆವಾಗ ನೆರಳಾಗಿ,
ಜೊತೆಯಾಗಿ, ನನ್ನ ಬಾಳ ಬೆಳಕಾಗಿ
ನೀ ಬರುವೆಯಾ?
***
ಆತುರವಿಲ್ಲ, ಕಾತುರವಿಲ್ಲ
ಕಾದಿರುವೆ ನಿನಗಾಗಿ,
ಕಾಯುವೆನು ನಿನಗಾಗಿ..!!

>> ಸಿ೦ಧು.ಭಾರ್ಗವ್.ಬೆ೦ಗಳೂರು.

2 comments:

  1. ಸಾಕಿಷ್ಟು ಭಾವನೆಯು ಇನಿಯನನು ಕರೆಯಲು
    ಇನ್ನೆರಡು ಸಾಲುಗಳು ಸೇರಿದರೆ ಸೊಗಸಾಗಲು
    ಸಮಸಂಖ್ಯೆ ಸಾಲುಗಳ ಹಾಡೊಂದು ಹೊಂದಿರಲು
    ಕವನದೊಳು ಕೂಡುವುದು ತಾಳಗಳ ಬಂಧನವು
    ****
    ಕಾದಿರುವ ಕಾಮಿನಿಯ ನೆರಳಿನ ಕವಿತೆಯಿದು
    ಭಾವಗಳು ತುಂಬಿರುವ ಹೋಳಿಗೆಯ ರುಚಿಯಂತೆ
    ಸನ್ನುಮೂನುಗಳಂತೆ ಕವಿತೆ ಪುಷ್ಪವು ಬಿರಿಯೆ
    ಮನದ ನವಿಲದು ಕುಣಿಯೆ ಕೇಕೆ ಹಾಕಿ

    ReplyDelete