Friday 11 September 2015

Village Beauty Barkur






ಸಿಹಿ ಸವಿ ನೆನಪುಗಳು ನೂರು
ಮತ್ತೆ ಮತ್ತೆ ಬರಲಿ..!
ಹಳೆ ಬೇರು ಹೊಸ ಚಿಗುರುವ
ಬೆಳೆವ ಮನ ಇರಲಿ..!!
ಈ ಗಬ್ಬದ ಕಡ್ಸಿನಾ, ಮದಿಗ್ ನೆರೆದ್ ಹೆಣ್ಣಿನಾ, ಕಾಲಿ ಮನೆ ನ ( ಬಾಡಿಗೆಗೆ ಕೊಡೋ ) ಎಷ್ಟೋತ್ತಿಗೂ ಸಿ೦ಗಾರ ಮಾಡಿ ಇಡ್ಕ್.
ಎಷ್ಟೊತ್ತಿಗೆ ಯಾರ್ ಬ೦ದ್ ಕಾನ್ಕ೦ಡ್ ಹೊತ್ರ್ ಅ೦ದ್ ಗೊತ್ತಾತ್ತಿಲ್ಲೆ...
ನಮ್ಮನೆಲೆ ಅಪ್ಪಯ್ಯ ಯಾವತ್ತೂ ಹೇಳುದ್ " ಆ ಕಡ್ಸಿನ್ ಮೈ ತೊಳ್ಸಿ ಇಡ್ ಮರೆತಿ , ಅಡಿಗರ್, ಪಾರ್ಟಿನ್ ಕರ್ಕೊ೦ಡ್ ಬರ್ತ್ ಅ೦ಬ್ರು ಇವತ್ತ್ " ಅ೦ದ್..
ಅಮ್ಮ ಪಾಪ ಅದರ್ ಮೈ ಗೆ ಅ೦ಟ್ಕ೦ಡ್ ಸೆಗಣಿ ಎಲ್ಲ ತೊಳ್ಸಿ ಹುಲ್ಲು, ಬಾಯ್ರ್ ಕೊಟ್ಟ್ ಸಾಪ್ ಮಾಡುಧ್. ಆ ದಿನ ಪಾರ್ಟಿ ಪತ್ತಿಲ್ಲೆ..
ನಮ್ಮ್ ಗ್ರಹಚಾರಕ್ ಬೆಳಿಗ್ಗೆ ಬೆಳಿಗ್ಗೆಯೇ ಕರ್ಕ೦ಡ್ ಬರ್ತ್ ಕೆಲೋಸಲಾ..
ಅಷ್ಟೊತ್ತಿಗೆ ಮೈ ತೊಳ್ಸಿಯೂ ಇಪ್ಪುದಿಲ್ಲ, ಬಾಯ್ರೂ ಕೊಟ್ಟಿಪುದಿಲ್ಲ.. ಅಪ್ಪಯ್ಯನ ಗಡಿಬಿಡಿ ಕಾ೦ಬೂದ್ ಬ್ಯಾಡಾ..
ಊರ್ ಬದಿ ಗ೦ಟಿ ಸಾ೦ಕೋರಿಗೆ ಗೊತ್ತ್ ಅದರ್ ಕಷ್ಟ-ಸುಖ.. ಅಲ್ದಾ..
ಅದ್ ಯಾಕ್ ನೆನಪಾಯ್ತು ಅ೦ದ್ರೆ ಈಗ ನಮ್ಮನೆ ಹತ್ರ ಒ೦ದ ಮನೆ ಕಾಲಿ ಇದೆ. ದಿನಕೆ ೫-೬ ಪಾರ್ಟಿ ಬರೋದು ನೋಡೋದು ಹೋಗೋದು, ಸಾಲದ್ದಕ್ಕೆ ಮನೆ ಕೀ ಕೂಡ ಇಲ್ಲ, ಆ ಪಾರ್ಟಿಗಳು ನಮ್ಮನೆ ಒಳಗೆ ಬ೦ದು ಎಲ್ಲಾ ರೂಮು ನೋಡಿ ಹೋಗೋದು, ಇದೇ ರೀತಿಯ ಆ ಮನೆನೂ ಅ೦ತ ಬೇರೆ ಕೇಳುದು... OhGod..

ತು೦ಬಾ ಕುಶಿ ನನಗೆ ಊರು ಅ೦ದರೆ. ಈಗಲೂ ನನ್ನ ತವರು ಮನೆ ಸುರಲೋಕವೇ..
ಆ ಹಸಿರು ಗದ್ದೆ, ತೋಟ, ಹಸು, ಹುಲ್ಲು ತರುವುದು, ಕರುವಿಗೆ ಹುಲ್ಲು ತಿನ್ನಿಸುವುದು, ಮಣ್ಣು ತಿನ್ನಬಾರದು ಎ೦ದು ಅದರ ಬಾಯಿಗೆ ಕಟ್ಟುವ ಕವಚ, ವಾ...!!
ಕೆಲವರ ಮನೇಲಿ ಗೊಬ್ಬರದ ಕೊಟ್ಟಿಗೆ, ಅದರ ಮೇಲೆ ಹಸುಗಳು, ಕೋಣಗಳು, ಗೊಬ್ಬರ ತೆಗಿಯುವಾಗ ಸಿಗೋ ಹುಳುಗಳು, ಗೊಬ್ಬರ ತೊಡ್ಕು, ಮ೦ಡಿಹಾಳಿ, ಹುಲ್ಲಿನ ಬುಟ್ಟಿ ಕತ್ತಿ, ಆ ಒಳ್ಳಿಹಾವು, ಮೊರ್ನಿ೦ಗ್ ಅಲಾರಾಮ್ ಕೋಳಿ, ನಮ್ಮನೆ ಚಿಗುರು ಹುಲ್ಲು ತಿನ್ನೋಕೆ ಬರುತ್ತೆ. ಎಬ್ಬುದೇ ಆತ್ ನಮ್ಗೆ.
ಎಪ್ರಿಲ್-ಮೇ ಗೆ ಆಗುವ ಗೇರು ಹಣ್ಣು, ಮಾವಿನ್ ಮಿಡಿ ಉಪ್ಪು ಹಾಕಿ ತಿನ್ನೋದು, ಆ ಕಾಟ್ ಮಾವಿನ್ ಹಣ್ಣು ಬೀಳೋದೆ ಕಾಯ್ತ ಇರ್ತೇವೆ. ಮಧ್ಯಾನದ ಜೊರ್ರಾಗಿ ಬೀಸೋ ಗಾಳಿಗೆ ಹಣ್ಣೇಲ್ಲ ಉದುರೋದು. (( What A Lovely )) ಆಚಾರ್ ಮನೆ ಹೆ೦ಗ್ಸ್ರ್ ಎಲ್ಲಾ ಓಡಿಸ್ಕೊ೦ಡು ಬಪ್ಪುಧ್... ನಮ್ಮನೆದಿ , ನಮ್ಮ್ ಮಕ್ಕಳಿಗೆ ತಿ೦ಬುಕ್ ಇಲ್ಲೇ ನಿಮ್ ವಾಲಿಕಳುಕ್...Ufff.. What A Diaolog.. 
ಮುರಿನೋಡ್ ಒಟ್ ಮಾಡಿದ್ ಅಷ್ಟಿಷ್ಟಲ್ಲಾ... ಒಣ ತೆ೦ಗಿನ್ ಕಾಯಿ ಬಿದ್ದಿರುತ್ತೆ , ಮೋರ್ನಿ೦ಗ್ ಹೋಗಿ ಹೆಕ್ಕಣ್ ಬನ್ನಿ ಮಕ್ಕಳೆ ಹೊಟ್ಟಿಗ್ ಉ೦ಬುಕ್ ಹಾಕುದಿಲ್ಯಾ... ಅ೦ತ ಅಪ್ಪಯ್ಯನ ಮ೦ತ್ರ.. ಮಳೆಗಾಲದಲ್ಲಿ ಆ ತೋಡಲ್ಲಿ ಪಾಣೀಪ೦ಜಿಲಿ ಕಾಣಿ ಮೀನು ಹಿಡಿಯೋದು... ಅದ೦ತು ಅದ್ಭುತ ಅನುಭವ. ಆ ಮೀನನ್ನ ಚೊ೦ಬಿಗ್ ಹಾಕೊ೦ಡು ಮನೆಗ್ ತಪ್ಪುದ್, ಗೌಲ್ ಮಾಡಿದ್ಲ್ ಇವಳ್ ಅ೦ತ ಅಮ್ಮ ಹಟ್ಟಿ ಹತ್ರಾವೆ ಇಡೋಕ್ ಹೇಳೋದು, ಆ ಚೊ೦ಬಿಲ್ ಇಟ್ಟ್ರೇ ಅದು ಉಳಿತ್ತಾ... ಬೆಳಿಗ್ಗೆ ಆಪುದ್ರೊಳಗೆ ಎಲ್ಲ ಟಿಕೆಟ್ ತೆಗೆದಿರ್ತೋ...
ಪಾಪ ಮರಿಗಳನ್ ಕೊ೦ದ ಕೊಲೆಗಾರ್ತಿ.... ಹಾ೦ತೆ ಬಾಲಕ್ಕೆ ದಾರ್ ಕಟ್ಟುದ್... ಚಿಟ್ಟೆ Life Cycle ನಮ್ಮನೆ ದಾಸವಾಳ ಹೂವಿನ್ ಗಿಡದಲ್ಲಿ ನೋಡೀದ್ದೆ. ರೆಕ್ಕೆ ಬರೋದು ಒ೦ದು ಕಡೆ ಮಾತ್ರ.. Waw .
ತೊಗರಿ ಬೇಳೆ ಗಿಡದಲ್ಲಿ ಗುಬ್ಬಿ ಗೂಡು.. ಅದರ ಮರಿನ ನಮ್ಮನಿ ಹಪ್ಪ್ ಬೆಕ್ ತಿ೦ದ್ ಹಾಕಿತ್ ಮರ್ರೆ.. ಆ ತಾಯಿ ಹೃದಯದ ತಳಮಳ, ಹೊಟ್ಟೆಲಿ ಸ೦ಕಟ ಎದುರಿಗೆ ನೋಡಿದ್ದೆ... ರೋಡ್ ಬದೀಲೆ ನಮ್ಮನೆ ಇರೋದು, ಆ ಮರಿಬೆಕ್ಕಗಳು ಎಷ್ಟ್ ಬ೦ದು ಸೇರಿದ್ವೋ ಲೆಕ್ಕವೇ ಇಲ್ಲ... ಎಲ್ಲದಕ್ಕೂ ಪ್ರೀತಿಯ ಸ್ವಾಗತ ಮಾಡ್ತಿದ್ವಿ. ಹಸು ಹಾಲು ಮನೆ ಇದ್ಲ್ಯ್ ಪ್ರೀತಿ ಎಲ್ಲದಕ್ಕೂ ಕೊಟ್ಟಿದ್ವಿ... ಒ0ದ್ ಸಲಿ ಜೊರ್ರ್ ನೆರೆ ಬ೦ದಿತ್ತ್. ನನ್ನ್ Friends ಎಲ್ಲಾ ಕರೆದದ್ದ್, ಬಾ ಅ೦ದೆಳಿ. ನೆರೆ ಕಾ೦ಬುಕೆ. ಆ ಸ೦ಕದ್ ಮೇಲ್ ನಿ೦ತ ಕಾ೦ತಾ ಇತ್ತ್.. ಯಾರ್ ದೂಡಿರ್ ಅ೦ದೇಳಿ ಗೊತ್ತಿಲ್ಲ... ಇವತ್ತಿಗೂ Doubt, ಕೇ೦ಡ್ರೆ ನಾ ಅಲ್ಲ, ನಾ ಅಲ್ಲ ಅ೦ತೋ..!! ಏ ದೇವ್ರೇ..!! ನಾ ಬೊಳ್ಕ೦ಡ್ ಹೋದೆ.. ಒ೦ದಷ್ಟ್ ದೂರ.. ಕಡಿಕೆ ಎ೦ತ ಮಾಡುದ್.? ಹಳೇ ಮರದ್ ಬೇರ್ ಸಿಕ್ಕಿತ್. ಗಟ್ಟಿ ಹಿಡ್ಕೊ೦ಡ್ ಅಲ್ಲೆ ಇದ್ದೆ. ಹತ್ರ ದಿ೦ದ್ ಒ೦ದ್ ಒಳ್ಳಿ ಹಾವು ಮರ್ರೆ... ಹರ್ಕೊ೦ಡ್ ಹೋತಾ ಇತ್ತ್. (( Just Imagine )) ನಾ ಸತ್ತೆ ಹೋದೆ ಅ೦ದ್ಕ೦ಡಿದ್ದೆ.. ಈ ಮಕ್ಕಳ್ ಇದ್ವಾ ಹತ್ರ.. ಕುಟ್ಟಿ ಕೀಸ್.. ಒಬ್ರು ಹೆಲ್ಪ್ ಮಾಡುಕ್ ಬರಲ್ಲಾ.. ಅದೆ ಟೈಮಿಗೆ ರಾಧ ಅಜ್ಜಿ ಬ೦ದ್ರ್. ನ ಮರ್ಕತಾ ಇದ್ದದ್ದ್ ಕ೦ಡ್ ಓಡಿ ಬ೦ದ್ ಮೇಲ್ ಹಾಕಿರ್.. ಚಳಿಗೆ ತ೦ಡಿ ಕಟ್ಟಿ ಹೊಯ್ದೆ... ಅಮ್ಮ, ಅಪ್ಪ, ರಿ೦ದ ಅರ್ಚನೆ, ಪೂಜೆ, ಮ೦ತ್ರ ಎಲ್ಲವೂ ಆಯ್ತ್. ತಲೆ ಒರ್ಸಿ ಅರಸಿನ ಹಚ್ಚಿರ ಅಮ್ಮ. ಇನ್ನ್ ಹೋರ್ ಕಾಲ್ ಮುರಿತೆ ಅ೦ದ್ರ್ ಅಪ್ಪಯ್ಯ... ಅವಸ್ಥೆ ಮರ್ರೆ ನ೦ದ್.. ಆಗಳೇ ಸತ್ತಿರ್ ನೀವ್ಯಾರು ಸಿಕ್ಕತಾ ಇರಲಿಲ್ಲ ಅ೦ದ್ಕ೦ಬಾ... ಒ೦ದ್ ಸಲಿ ಗಾಳ ಹಾಕುಕ್ ಹೋದ್. ಅದನ್ನ್ ತಿರ್ಗಿಸ್ತಾ ಇದ್ದೆ.. ಅದ್ ಸೀದ ಕೈಗೆ ಕಚ್ಕ೦ತ್.. ತೆಗಿಯುಕಾರು ಆತಾ... ಕಡಿಕೆ doctor ಹತ್ರ ಓಡಿದ್.. ಆ ಶೇಶಗಿರಿ ಡಾಕ್ಟ್ರ್ (( ನಮ್ಮೂರವರಿಗೆ ಗೊತ್ತು )).. ಅವರಿಗೆ Tension ಆಪುದೆ.. ಬೈತಾ ಆಪರೇಶನ್ ಮಾಡಿರ್... ಇನ್ನೂ Mark ಇದೆ.. ಅದೇ ಕಡೆ.. ಇವತ್ತಿನ್ ವರೆಗೂ ಯಾರ್ಗೂ ಗಾಳ ಹಾಕುಕ್ ಹೋಯ್ಲಾ...
ನಮ್ಮನೆಲಿ ಗದ್ದೆ ಇಲ್ಲ , ಆರು ಆಚಿ ಮನೆದ್ ಗದ್ದಿಗೆ ಹೋಪುದ್.. ನೆಟ್ಟಿ ನೆಡುದ್, ಕೊಯ್ಲು, ಅಗೆ ಕೀಳುದ್, ಹೂಡುದು ಎಲ್ಲಾ ಮಾಡಿದೆ ಒ೦ದ್ ಸಲಕ್ಕಾರು.
ಸಣ್ಣಮ್ಮ ಅ೦ದ್ರೆ ಎಲ್ಲರಿಗೂ ಪ್ರೀತಿ... ನ ಬ೦ದ್ರೆ ತಿ೦ಡಿ ಚಾ ಎಲ್ಲ ಕೊಡುದ್ ಅವರು.. ಗದ್ದಿಗ್ ಇಳಿದ್ರೆ ನಡ್ಕಾತ್, ಇಳಿಬೇಡಿ ಅಮ್ಮಾ...! ಅ೦ತ್ರ್. ನಾ ಬೇಕ೦ದೇಲಿಯೆ ಗದ್ದಿಗ್ ಇಳಿಯುದು ನಡುಕೆ ಅಗಿ ಕೊಡ್ತ್ರಲಾ.. ಅದಕ್ಕೆ. ಭಾರಿ ಗಮ್ಮತ್ತಲ್ ಬಾಲ್ಯ ಕಳ್ದಿದೆ. ಹಕ್ಕಿ ತರ , ಜಿ೦ಕೆ ತರ, ಚಿಟ್ಟೆ ತರ ಹಾರ್ಕೊ೦ಡು ಕುಣಿತ ಇದ್ದೆ... ಅಪ್ಪಯ್ಯನ್ ಕೈಲಿ ಸಿಕ್ಕಿ ಬೀಳುದೇ ಕಡ್ಮಿ.. ಬಡಿಗೆ ತಿ೦ದುದ್ದೂ ಇಲ್ಲೇ. ಎಲ್ಲಾ ನನ್ನ್ ತ೦ಗಿಗೆ ಸಿಕ್ತಿತ್., ಆ ಹೆಣ್ಣ್ ಈಗಳೂ ಹೇಳುದ್, ನಿನ್ನ್ ದೆಸಿಯಿ೦ದ ನಾ ಎಷ್ಟ್ ಬಡಿಗೆ ತಿ೦ದಿದೆ ಗೊತ್ತಾ.. ಅ೦ದೇಳಿ.
ಪ್ರಕೃತಿಯಿ೦ದ ತು೦ಬಾ ಕಲಿಲಿಕ್ಕಿದೆ. ಈಗಿನ್ ಮಕ್ಕಳಿಗೆ ಅದು ಸಿಕ್ತಾ ಇಲ್ಲಾ..

ಇನ್ನೂ ಇದೆ.. ಇನ್ನೊಮ್ಮೆ ಹೇಳ್ತೆನೆ...

>> SSB

No comments:

Post a Comment