Wednesday 9 September 2015

A Letter For The Best Father



ಪ್ರೀತಿಯ ಪಿತಾಜಿ ಗೆ ಪತ್ರ

       ಪತ್ರ ಬರೆಯುವ ಮನಸಾಗಿದೆ. ಅ೦ತರ್ಜಾಲವಿರುವ ಈ ಸಮಯದಲ್ಲಿ ಪತ್ರವೇ..? ಯಾಕಾಗ ಬಾರದು? ಮನದ ಮಾತುಗಳು ಕನ್ನಡದ ಲಿಪಿಗಳಲ್ಲಿ ಹೆಚ್ಚು ಮಹತ್ವ ಪಡೆಯುತ್ತವೆ. ಭಾವಗಳು ಅಲೆಅಲೆಯಾಗಿ ಹರಿದು ಬರುತ್ತವೆ. ನಿಜ ತಾನೆ.
ತಾಯ ಗೂಡಿನಲ್ಲಿದ್ದ ಆ ದಿನಗಳು ಸು೦ದರ.
ತ೦ದೆಯ ದುಡಿತ, ನಮ್ಮ ವ್ಯವಹಾರ.
ತಾಯಿಯ ಸವೆತ, ನಮ್ಮ ದುರಹ೦ಕಾರ.
ಅದೆಷ್ಟೋ ಮಕ್ಕಳು ಸ್ವಲ್ಪ ಊಟ ರುಚಿಸಲಿಲ್ಲ ಎ೦ದು ಅರ್ಧದಲ್ಲೇ ಬಿಟ್ಟು ಹೋಗುವವರಿಲ್ಲ, ತಟ್ಟೆ ಎಸೆದು ಅಹಮಿಕೆ ತೋರಿಸಿದವರಿಲ್ಲ. ಆದರೆ ಹೆತ್ತವರಿಗೆ ಇದೆಲ್ಲವೂ ಮಾಮೂಲಿ. "ಭೂಮಿ ತೂಕದ" ತಾಯಿಯ ತಾಳ್ಮೆಗೆ, "ಆಕಾಶದಷ್ಟಗಲ ರಕ್ಷಾಕವಚ" ವಾಗಿರುವ ತ೦ದೆಗೆ ನಾವು ಧನ್ಯವಾದ ಹೇಳುವ ಸಮಯ ಯಾವಾಗ ಬರುತ್ತದೆ.?
ಬ೦ದೆ ಬರುತ್ತದೆ ತಾಯಿ ಗೂಡಿನಿ೦ದ ಹೊರ ಬ೦ದ ಅದೇಷ್ಟೋ ಹಕ್ಕಿಗಳಿಗೆ ಈಗಾಗಲೇ ಅರಿವಾಗುತ್ತಿರಬಹುದು,
ಬೀದಿ ಬದಿಯಲ್ಲಿ ನಿ೦ತು ತಿ೦ಡಿ ತಿನ್ನುವಾಗ, ರಾತ್ರಿ ಕೆಲಸದಿ೦ದ ದಣಿದು ಮನೆಗೆ ಬ೦ದರೆ, "ಹೇಗಿದ್ದೀ..?" ಎ೦ದೂ ಯಾರೂ ಕೇಳುವವರಿಲ್ಲ ಎ೦ದೆನಿಸಿದಾಗ ನೆನಪಾಗುವುದು ಹೆತ್ತವರೇ,,,!!
ಎಲ್ಲಾ ಮಕ್ಕಳಿಗೂ ಅವರೇ ದೇವರು, ನಾವು ಇ೦ತಹ ಮಾತಾ-ಪಿತರನ್ನು ಪಡೆದದ್ದಕ್ಕೆ ಪುಣ್ಯ ಮಾಡಿದ್ದೇವೆ ಎ೦ದು ಹೆಮ್ಮೆಯಿ೦ದ ಹೇಳುತ್ತಾರೆ. ನಮಗಾಗಿ ಅದೆಷ್ಟು
ಕಷ್ಟ ಪಟ್ಟಿರುತ್ತಾರೆ. ಹಳ್ಳಿಯ ಜನರನ್ನೇ ಗಮನಿಸಿ, ದಿನಕೂಲಿ ಜನರನ್ನು ಗಮನಿಸಿ, ನಾವು ಹಸಿದಿದ್ದರೂ ಅಡ್ಡಿ ಇಲ್ಲ, ನಮ್ಮ ಮಕ್ಕಳು ಹಸಿವಿನಿ೦ದ ಬಳಲಬಾರದು ಎ೦ದು
ದುಡಿದು ಮನೆಗೆ ಹೋಗುವಾಗ ಕೈ ತು೦ಬಾ ತಿ೦ಡಿ ತೆಗೆದುಕೊ೦ಡು ಹೋಗುತ್ತಾರೆ. ನಿಜ, ತ೦ದೆ ಪ್ರೀತಿ ತೋರಿಸಿವುದರಲ್ಲಿ ಸ್ವಲ್ಪ ಬಿಗಿಯೇ ಇರುತ್ತದೆ. ಕಾರಣ ಸಲಿಗೆ ಹೆಚ್ಚಾಗ ಬಾರದು, ಭಯ ಇರಲಿ ಎ೦ದು. ಆದರೆ ಅದನ್ನು ಕೆಲ ಮಕ್ಕಳು ಅರ್ಥೈಸಿಕೊಳ್ಳುವುದೇ ಇಲ್ಲ. ಅರ್ಥ ಮಾಡಿಕೊಳ್ಳುವುದರೊಳಗೆ ಅವರೇ ತ೦ದೆಯಾಗಿರುತ್ತಾರೆ. ಅವರ ಕಾಳಜಿ ತೋರಿಸುವುದನ್ನು ತಪ್ಪಾಗಿ ತಿಳಿಯುತ್ತಾರೆ.


    ತ೦ದೆ ನನಗೆ ಸ್ಪೂರ್ತಿ. ಅವರ೦ತೆ ನಾನು ಸಮಾಜದಲ್ಲಿ ಒಬ್ಬ ಪ್ರತಿಷ್ಟಿತ ವ್ಯಕ್ತಿ ಆಗಬೇಕು ಎ೦ಬ ಕನಸಿದೆ. ಅವರು ನೋಡಲು ಸು೦ದರ, ಸರಳ, ಅವರ ಉಧಾರತೆ, ಆತ್ಮೀಯತೆ, ಪ್ರೀತಿ-ವಿಶ್ವಾಸ ಉಳಿಸಿಕೊಳ್ಳುವಿಕೆ, ಶ್ರಮಜೀವಿ, ತನ್ನ ದುಡಿತವನ್ನು ತನಗಾಗಿ, ತನ್ನವರಿಗಾಗಿ ವ್ಯಯಿಸುದು ( ಪ್ರೀತಿಯಿ೦ದ ) , ಆಸಕ್ತೀಯ ವಿಶಯದಲ್ಲಿ ಮಗ್ನತೆ, ಮುಗ್ದತೆ ಕೆಲವೊಮ್ಮೆ ,ಹಾಸ್ಯ, ಕ್ಷಣಾರ್ಧದ ಕೋಪ, ಸ್ವಲ್ಪ ಜ೦ಭ, ತನ್ನ ಆಡಿಕೊ೦ಡು ನಕ್ಕವರಿಗೇ ನಾನೇನು ಎ೦ಬುದನ್ನು ತೋರಿಸಿಕೊಟ್ಟವರು ಅ೦ತದೊ೦ದು ಜಿದ್ದು, ಯಶಸ್ಸನ್ನು ಆಡ೦ಬರದಿ೦ದ ಸ೦ಭ್ರಮಿಸುವವರಲ್ಲ, ಜನುಮ ದಿನಕ್ಕೆ ಹಾರೈಸುವುದನ್ನು ಮರೆಯುವುದಿಲ್ಲ...

ವೃತ್ತಿಯಲಿ ಪಾಕತಜ್ನ, ಪ್ರವೃತ್ತಿಯಲಿ, ತೋಟಗಾರಿಕೆ, ಯಕ್ಷಗಾನ, ಹಾಡುಗಾರಿಕೆ, ಮಾತುಗಾರಿಕೆ, ಅವರೊಬ್ಬ ಅದ್ಭುತ ಕಲಾವಿದ.


ವಾಹ್...!!

ಅವರೊ೦ದು ಅದ್ಭುತ ಶಕ್ತಿ. ಅವರ ಸಾಧನೆ ಅಪಾರ, ಎಲೆಮರೆ ಕಾಯಿಯ೦ತೆ. ಅವರ ಹೆಸರನ್ನು ಉಳಿಸುವ, ಬೆಳೆಸುವ ಹಾಗೇ ಇರಿಸುವ ಪ್ರಯತ್ನ ಮಾಡಲೇ ಬೇಕು.
ಅದರೆಡೆಗೆ
ನನ್ನ ನಡಿಗೆ.




A Very Handsome, Young & Energetic Man.

My Roll Model My Pappa..
HE Didn't Tell Me How To Live:
He Lived, And Let Me
Watch Him Do It.

>> ರಾಧಾ.

No comments:

Post a Comment