Wednesday 30 September 2020

ಭುವನದ ಭಾಗ್ಯ ದ ವಿಮರ್ಶಕ , ಸಾಹಿತಿ ಡಾ. ಜಿ. ಎಸ್. ಆಮೂರ ರ ಕುರಿತಾದ ಸಂಗ್ರಹ ಲೇಖನ

 ಹಿರಿಯ ಸಾಹಿತಿ, ವಿಮರ್ಶಕರಾದ , ಭಾಷಾನುವಾದಿ ಡಾ.ಶ್ರೀ.ಗುರುರಾಜ ಶ್ಯಾಮಾಚಾರ ಆಮೂರರು (೦೮-೦೫-೧೯೨೫- ೨೮-೦೯-೨೦೨೦ ) ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ.



🌼🌼🙏🌼🌼🙏🌼🌼🙏🌼🌼🙏 



ಸಂಗ್ರಹ ಲೇಖನ :-



ಧಾರವಾಡದಲ್ಲಿ ನೆಲೆಸಿರುವ ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ, ಡಾ. ಜಿ.ಎಸ್. ಆಮೂರ, ಸದಾ ಸಾಹಿತ್ಯಾಸಕ್ತರು. ಇವರ "ಭುವನದ ಭಾಗ್ಯ" ಎಂಬ ಕೃತಿಗೆ ೧೯೯೬ ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.

ಅಧ್ಯಾಪಕರಾಗಿದ್ದಾಗಲೇ ‘ಕಾಮಿಡಿಯ ಪರಿಕಲ್ಪನೆ’ಎಂಬ ಮಹಾಪ್ರಬಂಧ ಬರೆದು ಪಿ.ಎಚ್.ಡಿ. ಪಡೆದರು.ಕಳೆದ ಐದು ದಶಕಗಳಿಂದಲೂ ವಿಮರ್ಶಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಡಾ.ಅಮೂರ ಅವರು ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದಾರೆ. ಧಾರವಾಡದ ಕರ್ನಾಟಕ ಕಾಲೇಜಿನಿಂದ ಬಿ.ಏ(ಗೌರವ) ಪದವಿ ಪಡೆದರು. ಆ ಬಳಿಕ ಕುಮಟಾ ಹಾಗು ಗದಗ ಹಾಗು ಔರಂಗಾಬಾದ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ೧೬ ವರ್ಷ ಸೇವೆ ಸಲ್ಲಿಸಿದರು.

ಆಧುನಿಕ ಕನ್ನಡಸಾಹಿತ್ಯ ವಿಮರ್ಶಕರಲ್ಲಿ ಅತಿ ಅಗ್ರಮಾನ್ಯರಲ್ಲೊಬ್ಬರೆಂದು ಪರಿಗಣಿಸಲ್ಪಟ್ಟಿರುವ ಡಾ. ಅಮೂರ ರವರು, "ಕರ್ನಾಟಕ ರಾಜ್ಯಸರ್ಕಾರಪ್ರದಾನಮಾಡುವ, ಪಂಪ ಪ್ರಶಸ್ತಿವಿಜೇತರು" . 


ಕನ್ನಡ ಹಾಗೂ ಇಂಗ್ಲೀಷ್ ಸಾಹಿತ್ಯಪ್ರಾಕಾರಗಳಲ್ಲಿ ಪ್ರಕಾಂಡ ಪಂಡಿತರೆಂದು ಪರಿಗಳಿಸಲ್ಪಟ್ಟಿರುವ ಡಾ. ಅಮೂರರು, ಕನ್ನಡ ಸಾಹಿತ್ಯವನ್ನು ಇಂಗ್ಲೀಷ್ ಓದುಗರಿಗೆ ಪರಿಚಯಿಸಿದ್ದಾರೆ. ಇಂಗ್ಲೀಷ್ ಹೇಳಿಕೊಡುವ ಭಾಷೆಯಾದರೆ, ಬರೆಯುವುದು, ಕೃತಿರಚನೆಗಳು ಸಾಮಾನ್ಯವಾಗಿ ಕನ್ನಡಭಾಷೆಯಲ್ಲಿ. ಧಾರವಾಡ, ಔರಂಗಬಾದ್ ; ಹೀಗೆ ಹೋದಡೆಯೆಲ್ಲಾ ಅಪಾರ ಶಿಷ್ಯರನ್ನು ಗಳಿಸಿದ್ದಾರೆ. ವಿಮರ್ಶೆಯ ಜೊತೆಗೆ, ಸತತ ಓದು, ಬರವಣಿಗೆ, ತಮ್ಮ ಅಧ್ಯಾಪನ ಕಾರ್ಯ, ಆಡಳಿತಕಾರ್ಯಗಳ ಜೊತೆಗೆ ಎಲ್ಲವನ್ನು ಸರಿತೂಗಿಸಿಕೊಂಡು ತಾವೂ ಬೆಳೆದು, ತಮ್ಮ ಅಪಾರ ಶಿಷ್ಯವೃಂದಕ್ಕೆ ಮಾರ್ಗದರ್ಶನ ಮಾಡುತ್ತಿರುವ ರೀತಿ, ಅನನ್ಯ.

ನೃಪತುಂಗ ಪ್ರಶಸ್ತಿ - 2020 ಕ್ಕೆ ಕೂಡ ಭಾಜನರಾಗಿದ್ದರು.


ಹಿರಿಯ ಸಾಹಿತಿಗಳ ಆತ್ಮಕ್ಕೆ ಶಾಂತಿ ಕೋರೋಣ... 🙏🌼

🌼🌼🌼🌼🌼🌼🌼🌼🌼🌼🌼🌼🌼🌼🌼🌼

ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹ.....

ಕೃಪೆ : ವಿಜಯವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ ಪೇಪರ್ ದಿನಪತ್ರಿಕೆ ದಿನಾಂಕ : ೨೯/೦೯/೨೦೨೦ 
























No comments:

Post a Comment