Saturday 26 September 2020

ಗಾಯನ ನಿಲ್ಲಿಸಿದ ಕೋಗಿಲೆ SPB balasubramaniam

ಹಾಡು ನಿಲ್ಲಿಸಿದ ಗಾನ ಕೋಗಿಲೆ:-










ಸುಮಾರು ನಲವತ್ತು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಬಹುಭಾಷೆಗಳಲ್ಲಿ ಹಾಡಿದ ಭಾರತೀಯ ಜನಪ್ರಿಯ ಸಂಗೀತಗಾರ, ಸಂಗೀತ ನಿರ್ದೇಶಕ, ಡಬ್ಬಿಂಗ್ ಆರ್ಟಿಸ್ಟ್ ಭಿನ್ನ ವಿಭಿನ್ನ ಶೈಲಿಯ ಗಾಯನದ ಮೂಲಕ  ಪ್ರಖ್ಯಾತಿ ಪಡೆದ ಎಸ್. ಪಿ. ಬಾಲಸುಬ್ರಹ್ಮಣ್ಯಂ ಇಂದು ನಮ್ಮನ್ನೆಲ್ಲ ಅಗಲಿದ್ದಾರೆ.

ಅವರ ಹಾಡುಗಳ ಸಂಗ್ರಹ ಶ್ರೋತೃಗಳಿಗೆ ಹಾಗು  ಸಂಗೀತಲೋಕಕ್ಕೆ ಒಂದು ಆಸ್ತಿ.
ನೋವು ನಲಿವಿನಲ್ಲಿ ಅವರ ಹಾಡುಗಳೇ ಸ್ಪೂರ್ತಿ.
ಕೆಲವು ಹಾಡುಗಳ ಮೊದಲ ಸಾಲುಗಳನ್ನು ಬರೆದಿರುವೆನು. ಸ್ನೇಹ, ಪ್ರೀತಿ, ಸಂಸಾರ, ದಾಂಪತ್ಯ, ಕರುನಾಡು, ಕಾವೇರಿ, ಜೀವನದ ಸಾರ ತಿಳಿಸುವ ಒಂದಷ್ಟು ಹಾಡುಗಳ ಸಂಗ್ರಹ ನಿಮಗಾಗಿ. ಓದುತ್ತಾ ಗುನುಗಲು ಶುರುಮಾಡಿ. ಸರ್ವಂ ನಾದಮಯಂ.

1) ಕೈತುತ್ತು ಕೊಟ್ಟವೇ ಐ ಕವ್ ಮೈ ಮದರ್ ಇಂಡಿಯಾ
2) ಅಂಬರವೇರಿ ಅಂಬರವೇರಿ ಸೂರ್ಯನು ಬಂದಾನೋ
ಥಳ ಥಳ ಥಳಾ ಜಗ ಥಳ ಥಳ
3) ಮುತ್ತು ಮುತ್ತು ನೀರ ಹನಿಯ ತಾಂ ತನನಾ ಎಂದು ನಲಿಯುತ
4) ಮನಸಾರೆ ಹಕ್ಕಿಯಾಗಿ ಮುಗಿಲಾಗೇ ತೇಲಿ ತೇಲಿ
5) ಈ ಸುಂದರ ಬೆಳದಿಂಗಳ ಈ ಕಂಪಿ‌ನ ಅಂಗಳದಲಿ
ನನ್ನ ನಿನ್ನ ನಡುವಿನಲೀ ಪ್ರೇಮ ಚಿಗುರಲಿ ಎಂದರು//
6) ನಮ್ ಕಡಿ ಸಾಂಬಾರ್ ಅಂದ್ರೆ ನಿಮ್ ಕಡಿ ತಿಳಿಯಂಗಿಲ್ಲ
7) ಬಾರೆ ಸಂತೆಗೆ ಹೋಗುವಾ ಬಾ, ಸಿನಿಮಾ ಥಿಯೇಟರ್ ಲ್ಲಿ ಕೂರುವ ಬಾ...
8) ಕುಚುಕು ಕುಚುಕು ಕುಚುಕು ನಾ ಚಡ್ಡಿ ದೋಸ್ತಿ ಕಣೋ ಕುಚುಕು ಎಂದು ಗೆಳೆಯನ ಹೊಗಳುತ...
9) ರಕ್ಷಕ ರಕ್ಷಕ ಆಪ್ತ ರಕ್ಷಕ ಆಪತ್ತ ಕಳೆವನು
10) ಅಣ್ಣಯ್ಯ ತಮ್ಮಯ್ಯ ನಂಜುಡೇಶ್ವರ ನಾನಯ್ಯ ಎಂದು ಅಭಯ ನೀಡಿದರು//

11) ಸ್ನೇಹಕ್ಕೆ ಸ್ನೇಹ ಪ್ರೀತಿಗೆ ಪ್ರೀತಿ , ಲೋಕದಲ್ಲಿ ಸ್ನೇಹ ಚಿರಂಜೀವಿಯಾಗಿರಲಿ,
12) ಮಾಮರವೆಲ್ಲೋ ಕೋಗಿಕೆ ಎಲ್ಲೋ ಏನೀ ಸ್ನೇಹ ಸಂಬಂಧ ಎಂದರು//
13) ಅಂಕುಡೊಂಕು ದಾರಿಬ್ಯಾಡ, ಸುಂಕ ಇಲ್ಲದ ಊರೇ ಬ್ಯಾಡ
14) ನಗುವ ನಯನ ಮಧುರ ಮೌನ ಎಂದು ತಿಳಿಸುತ
15) ಮದ್ಯರಾತ್ರಿಲಿ ಹೈವೆ ರೋಡಲ್ಲಿ, 16) ಸ್ವಾತಿ ಮುತ್ತಿನ ಮಳೆ ಹನಿಯೇ,
17) ಯಾವುದೋ ಈ ಬೊಂಬೆ ಯವುದೋ,

18) ನೋಡಮ್ಮ ಹುಡುಗಿ ಕೇಳು ಸರಿಯಾಗಿ ಎಂದು ಹರೆಯದ ಹುಡುಗಿಗೆ ಬುದ್ದಿ ಮಾತ ಹೇಳಿದರು//
19) ಯುಗಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ 20)ಯಾರಮ್ಮ ಇವನು ನಶೆಯ ಹುಡುಗ

21) ಶ್ರೀಗಂಧ ಶ್ರೀಗಂಧ ಈ ಅಂದ ಈ ಅಂದ ಶ್ರೀಗಂಧ
22) ಏನಾಯಿತು ನನಗೀದಿನ ಏನಾಯಿತು
23) ಗಿಣಿಯೇ ಪಂಚರಂಗಿ ಗಿಣಿಯೇ
24) ಪ್ರೇಮಲೋಕದ ಪಾರಿಜಾತವೇ...
25) ಚೆಲುವೆ ನೀನು ನಕ್ಕರೆ ಓ ಹೋ ಹೋ
26) ಮೀನಾಕ್ಷಿ ನಿನ್ನ ಕಣ್ಣ ಮೇಲೆ ಊರ ಜನರ ಕಣ್ಣು
27) ಸೇವಂತಿಯೇ ಸೇವಂತಿಯೇ ನನ್ನಾಸೆ
28) ಎದೆಯಲ್ಲಿ ಘಮ್ ಅಂತಿಯೇ ಎಂದು ನಾಚಿದರು//

29) ಏರಿ ಮೇಲೆ ಏರಿ ಮೇಲೆ ಕೆಳಗೆ ಹಾರಿ ಮನ್ಸು ಕುಣಿತೈತಲ್ಲೋ
30) ಮಾರಿಕಣ್ಣು ಹೋರಿಮ್ಯಾಲೆ , ಕಟ್ಕಕನ್ನ ...
31) ಒಂಟಿ ಒಂಟಿಯಾಗಿರುವುದು ಬೋರು ಬೋರು
32) ಸುಂದರಿ ಸುಂದರಿ ಸುರಸುಂದರಿ ಸುಂದರಿ ನಿನ್ನ ಪ್ರೇಮದ ಮೋರೆಯನೊಮ್ಮೆ ತೋರುವೆಯಾ
33)/ಮಾಮ ಮಾಮ ಮಸ್ತಿ, ದೊಡ್ಡವರೆಲ್ಲ ಜಾಣರೆಲ್ಲ
34) ಭಲೆ ಭಲೇ ಚಂದದ ಚೆಂದುಟಿ ಹೆಣ್ಣು ನೀನು
35) ಹಳ್ಳಿ ಲಾವಣಿಯಲಿ ಲಾಲಿ ಸುವ್ವಲಾಲಿ
36) ಪ್ರೀತಿಯೇ ನನ್ನುಸಿರು,
37) ಲೋಕವೇ ಹೇಳಿದ ಮಾತಿದು, ವೇದದ ಸಾರವೇ ಕೇಳಿದು,
38) ಬಣ್ಣ ನನ್ನ ಒಲವಿನ ಬಣ್ಣ, ನನ್ನ ಬದುಕಿನ ಬಣ್ಣ
ಎಂದು ಪ್ರೇಮದೇವತೆಯ ಹೊಗಳಿದರು//

39) ನಾ ಹಾಡಲು , ನೀವು ಹಾಡಬೇಕು,
40) ಹಾವಿನ ದ್ವೇಷ ಹನ್ನೆರಡು ವರುಷ ,
41) ನನ್ನ ರೋಷ ನೂರು ವರುಷ
42) ನೀನು ನೀನೆ ಇಲ್ಲಿ ನಾನು ನಾನೇ,
44) ನನ್ನ ಹಾಡು ನನ್ನದು ಎಂದರೂ
45) ಪವಡಿಸು ಪರಮಾತ್ಮ ಶ್ರೀವೆಂಕಟೇಶ ಎಂದು ಭಗವಂತನಿಗೆ ನಮಿಸಿದರು//

46) ಮನಸೇ ಬದುಕು ನಿನಗಾಗೀ ಬವಣೆ ನಿನಗಾಗೀ..
47) ಬಣ್ಣ ನನ್ನ ಒಲವಿನ ಬಣ್ಣ, 48) ಪ್ರೇಮ ಗೀಮ ಜಾ‌ನೇ ದೋ,
49) ನಲಿವ ಗುಲಾಬಿ ಹೂವೇ... ಮುಗಿಲ‌ ಮೇಲೇರಿ ನಗುವೆ

50) ಪ್ರೇಮದ ಕಾದಂಬರಿ ಬರೆದೆನು ಕಣ್ಣೀರಲಿ
ಎಂದು ವಿರಹ ಗೀತೆ ಹಾಡಿದರು//

51) ತಾಳಿ ಕಟ್ಟುವ ಶುಭವೇಳೆ ಕೈಯಲ್ಲಿ ಹೂವಿನ ಮಾಲೆ
52) ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ
ಮಾವ ಮಗುವಾದನು ಎಂದು ಅಳಿಯ ಮಾವನ ಸಲುಗೆ,
53) ನಮ್ಮ ಮನೆಯಲಿ ದಿನವು ಬೆಳಗೋ ಚೈತ್ರವೇ
54) ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
55) ಹೊಡಿತವ್ಳೇ ಬಡಿತವ್ಳೇ ನನ್ನ ಹೆಂಡ್ತೀ...
56) ನೀನೇ ನನ್ನ ನೀನೇ ನನ್ನ ತುಂಬಾ ತುಂಬಾ ಪ್ರೀತಿ ಮಾಡೋನು,
57) ಮಲ್ನಾಡ್ ಅಡಿಕೆ ಮೈಸೂರ್ ವಿಳ್ಯದೆಲೆ ಎಂದು ಹೆಂಡತಿಯ ಜೊತೆಗೆ ಹೆಜ್ಜೆಹಾಕಲು ಪ್ರೇರೇಪಿಸಿದರು//

58) ಸಂಗೀತವೇ ನನ್ನ ಉಸಿರು,ಚಪ್ಪಾಳೆಯೇ ನನ್ನ ದೇವರು
59) ಕನ್ನಡ ನಾಡಿನ ಜೀವನದಿ ಈ ಕಾವೇರಿ
60) ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ
61) ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ
62) ಕಲ್ಲಾದರೆ ನಾನು ಕಾವೇರಿಯ ಮಡಿಲಲಿ ಇರುವೆ
63) ಕಾವೇರಮ್ಮ ಕಾಪಾಡಮ್ಮ ಈ ದೋಣಿಯ ತೇಲಿಸು
64) ಈ ಕನ್ನಡ ಮಣ್ಣನು ಮರಿಬೇಡ ಓ‌ ಅಭಿಮಾನಿ
65) ಇದೇ ನಾಡು ಇದೇ ಭಾಷೆ ಎಂದೆಂದೂ ನಿನ್ನದಾಗಿರಲಿ
ಎಂಬ ಅಭಿಲಾಷೆ ಹೊಂದಿದವರು//

66) ಕೂರಕುಕ್ರಳ್ಳಿ ಕರೆ, ಈ ಭಯ ಬಿಸಾಕಿ ಲವ್ ಮಾಡಿ
67) ಮಂಡ್ಯದ ಗಂಡು, ಮುತ್ತಿನ ಚಂಡು
68) ನೋಡಿ ಸ್ವಾಮಿ ನಾವಿರೋದು ಹೀಗೆ
69) ನಮಗೆ ಮದುವೆ ಬೇಡ ಸ್ವಾಮಿ
70) ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ
71) ಏನೊ ಮಾಡಲು ಹೋಗಿ, ಏನು ಮಾಡಿದೆ ನೀನು,
72) ಸಂತ ಅರಳುವ ಸಮಯ , ಮರೆಯೋಣ ಚಿಂತೆಯಾ
73) ಅಂತರಂಗದ ಹೂಬನಕೆ, 
74) ಕೇಳದೇ ನಿಮಗೀಗ ದೂರದಿಂದ ಯಾರೋ
75) ನೀನಿರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
76) ನೀನೇ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ
77) ತನುವಿನ ಮನೆಗೆ ಬಾ ಅತಿಥಿ... ಬಾ ಅತಿಥಿ...
78) ಚಾಮುಂಡಿ ತಾಯಿ ಆಣೆ ನಾನೆಂದು ನಿಮ್ಮೋನೇ
79) ಮಡಿಕೇರಿ ಸಿಪಾಯಿ ಮುತ್ ತಾತಮರೇ‌ನ...
80)ಇದೆ ನಾಡು ಇದೇ ಭಾಷೆ ಎಂದೆಂದೂ ನನ್ನದಾಗಿರಲಿ

81) ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಛಾಟಿ ಕಣೋ
ನಿಂತಾಗ ಬುಗುರಿ ಆಟ, ಎಲ್ಲಾರು ಒಂದೇ ಓಟ
ಕಾಲಾನೇ ಕ್ಷಣಿಕ ಕಣೋ
82) ದೇವರು ಹೊಸೆದ ಪ್ರೇಮದ ದಾರ.....
83) ನಮ್ಮ ಊರ ದೀಪ ಆರಿಹೋಯಿತಲ್ಲೋ.... ಎಂದು ಶ್ರೋತೃಗಳಿಗೆ ಕಣ್ಣೀರು ಹಾಕಿಸುತಲೇ ಹೊರಟುಹೋದರು

- ಸಿಂಧು ಭಾರ್ಗವ್ | ಬೆಂಗಳೂರು-೨೧
#spbalasubramaniam #ಭಾವಪೂರ್ಣ_ಶ್ರದ್ಧಾಂಜಲಿ
#ಎಸ್_ಪಿ_ಬಾಲಸುಬ್ರಹ್ಮಣ್ಯಂ


No comments:

Post a Comment