Thursday 8 November 2018

ಕವನ: ಅರಿವಿನ ದೀಪವ ಬೆಳಗಿರಿ

Model: Chandan Bhat.Udupi

ಕವಿತೆ :- ಅರಿವಿನ ದೀಪವ ಬೆಳಗಿರಿ

ಬೆಳಕಿನ ಕೆಳಗೆ ನೆರಳು ಇದೆ
ನೋವಿನ ಜೊತೆಗೆ ನಲಿವು ಇದೆ
ದೀಪವ ಬೆಳಗಿರಿ! ಅರಿವಿನ ದೀಪವ ಬೆಳಗಿರಿ!!

ಸೋಲಿನ ಹಿಂದೆ ಗೆಲುವು ಇದೆ
ಸಾಧನೆಯ ಹಿಂದೆ ಛಲವು ಇದೆ
ದೀಪವ ಬೆಳಗಿರಿ!ಅರಿವಿನ ದೀಪವ ಬೆಳಗಿರಿ !!

ಹಗಲಿನ ಹಿಂದೆ ಇರುಳು ಇದೆ
ಬಿಸಿಲಿನ ಹಿಂದೆ ನೆರಳು ಇದೆ
ದೀಪವ ಬೆಳಗಿರಿ !ಅರಿವಿನ ದೀಪವ ಬೆಳಗಿರಿ !!

ಕೆಡುಕಿನ ಹಿಂದೆ ಒಳಿತು ಇದೆ
ಶ್ರಮದ ಹಿಂದೆ ಫಲವು ಇದೆ
ದೀಪವ ಬೆಳಗಿರಿ !ಅರಿವಿನ ದೀಪವ ಬೆಳಗಿರಿ !!

ಹಮ್ಮಿನ ಹೊರತು ವಿನಮ್ರವಿದೆ
ಮತ್ಸರದ ಹೊರತು ಸತ್ಸಂಗವಿದೆ
ದೀಪವ ಬೆಳಗಿರಿ !ಅರಿವಿನ ದೀಪವ ಬೆಳಗಿರಿ !!

ಅಕ್ಷರದ ಒಳಗೆ ಜ್ಞಾನವಿದೆ
ಸುಜ್ಞಾನದ ಒಳಗೆ ವಿನಯವಿದೆ
ದೀಪವ ಬೆಳಗಿರಿ !ಅರಿವಿನ ದೀಪವ ಬೆಳಗಿರಿ !!

ಮೋಹದ ಮಾತಲಿ ಕಾಮವಿದೆ
ತಳುಕಿನ ನಡೆಯಲಿ ಕಪಟವಿದೆ
ದೀಪವ ಬೆಳಗಿರಿ !ಅರಿವಿನ ದೀಪವ ಬೆಳಗಿರಿ !!

ಹಿರಿಯರ ಮಾತಲಿ ಸತ್ಯವಿದೆ
ಸತ್ಯದ ಹಾದಿಯಲಿ ಸಗ್ಗವಿದೆ
ದೀಪವ ಬೆಳಗಿಸಿರಿ !ನಿಮ್ಮಯ ಮನವನು ಅರಳಿಸಿರಿ !!

ಬರೆದವರು- ಸಿಂಧು ಭಾರ್ಗವ್. 

Mud lamp (ಮಣ್ಣಿನ ಹಣತೆ)

No comments:

Post a Comment