Thursday 22 September 2016

Kaveri NammavaLu Poem - ಕಾವೇರಿ ನಮ್ಮವಳು ಇದು ಕನ್ನಡಿಗರ ಕೂಗು

(@@@@@@@@)

(( ಕನ್ನಡ ರಾಪ್‌ಸಾಂಗ್...))
~~~~~~~~~~~~~~~
ಇದು ನಮ್ಮ ನಾಡು ,
ಕನ್ನಡ ಬೀಡು..
ಕಾವೇರಿ ನಮ್ಮವಳು ,
ನೀನ್ ಏನಾದರೂ ಮಾಡು..

ಈ ನೆಲದಲಿ ಹುಟ್ಟಿ ಪುಣ್ಯಮಾಡಿದೆವು..
ಕಾವೇರಿ ನೀರನು ಕುಡಿದು ಧನ್ಯರಾದೆವು..

ಕರಾವಳಿಯಿಂದ ಬಂದು ನೆಲೆ ಕಂಡೆವು..
ಗಾಳಿ ನೀರಿಗೂ ನಾವು ಈಗ ಹೊಂದಿಕೊಂಡೆವು..

ಈಗ ಕಾವೇರಿ ಜಗಳ ಅತಿಯಾಗಿದೆ..
ಆಗದು ಎಂದರೂ ಒತ್ತಡ ಬಂದಿದೆ..

ಕುಡಿಯಲು ಇಲ್ಲಿ ನೀರಿಲ್ಲ..
ಬೆಳೆಗಳಿಗೆ  ನೀರಿಲ್ಲ.
ಪ್ರಾಣಿಸಂಕುಲಕೆ ನೀರಿಲ್ಲ..
ಗಂಟಲು ಒಣಗಿದೆ ನೀರಿಲ್ಲ.. ನೀರಿಲ್ಲ ನೀರಿಲ್ಲ ನೀರಿಲ್ಲ...

ಕೈ ಕಟ್ಟಿ ಕುಳಿತರೇ ಏನೂ ಆಗಲ್ಲ..
ಜನತೆ ಎಚ್ಚೆತ್ತುಕೊಳ್ಳಲೇ ಬೇಕಲ್ಲ..

ಸಿಟಿಯಾದರೇನು?
ಹಳ್ಳಿಯಾದರೇನು?
ಮಳೆ ಇಲ್ಲವಾದಾಗ
ಬೆಳೆ ಬೆಳೆಯುವುದೇನು..?(೨)

ನ್ಯಾಯದೇವತೆ ಅಳುತಿಹಳು,
ಕಾವೇರಿಯೇ ಬಿಕ್ಕುತಿಹಳು,
ನ್ಯಾಯಕೊಡಲಾಗಲಿಲ್ಲ ವೆಂದು.

ಒಂದು ವರುಷದ ಮಾತಲ್ಲ
ಯಾವಾಗಲು ಹೀಗೆಯಾಗುತಿದೆಯಲ್ಲ..
ಏನು ಮಾಡಲಾಗುತ್ತಿಲ್ಲವೆಂದು..

ಅಧಿಕಾರಿಗಳ ಕಾದರೇನು ಪ್ರಯೋಜನವಿಲ್ಲ..
ನಮ್ಮವಳಿಗಾಗಿ ನಾವೇ ಹೋರಾಡಬೇಕಲ್ಲ..(೨)
ಬೇಕಲ್ಲ ಬೇಕಲ್ಲ ಬೇಕಲ್ಲ...

ಇದು ನಮ್ಮನಾಡು ,
ಕನ್ನಡ ಬೀಡು..
ಕಾವೇರಿ  ನಮ್ಮವಳು ,
ನೀ ಏನಾದರೂ ಮಾಡು..

- ಸಿಂಧು ಭಾರ್ಗವ್..
http://nannalekani001.blogspot.in/2016/09/kaveri-nammavalu-poem.html?m=1

2 comments: