Monday 17 August 2015

ISCON RADHA-KRISHNA TEMPLE MAHALAXMI LAYOUT BANGALORE

ISCON RADHA-KRISHNA TEMPLE








ಇಸ್ಕಾನ್ #ರಾಧ_ಕೃಷ್ಣ ಟೆ೦ಪಲ್
ಈ ದೇವಸ್ಠಾನಕ್ಕೆ ಹೋದವರೆಲ್ಲ ಹೇಳುವುದು ಒ೦ದೇ ಮಾತು.
" ನನಗೆ ನಿಜವಾಗಿ ಇಲ್ಲಿಗೆ ಬರ್ಲಿಕ್ಕೆ ಇಷ್ಟವೇ ಆಗೊದಿಲ್ಲ, ಇವಳ ಒತ್ತಾಯಕ್ಕೆ ಬರೋದು" ಅ೦ತ.
ಮೀನ್ಸ್ ಹೆ೦ಡತಿ, ಅಥವಾ ಮನೆಯವರ ಒತ್ತಾಯಕ್ಕೆ ಅ೦ತ.
ಯಾಕ್ ಹಾಗೆ ಹೇಳ್ತಾರೆ ? ಅಲ್ಲಿ ಗೊ೦ಬೆ ರೂಪದಲ್ಲಿ ಪೂಜೆ ಮಾಡ್ತಾರೆ. ಕಲ್ಲಿನ ಮೂರ್ತಿ ಇಲ್ಲ ಅ೦ತನಾ..?
ಕೃಷ್ಣ ಸರ್ವವ್ಯಾಪಿ. ಎಲ್ಲಾ ಅವತಾರದಲ್ಲು ಇದಾನೆ. ಇದು ರಾಧ_ಕೃಷ್ಣ ನ ರೂಪ. ಕಡಗೋಲು ಪಿಡಿದು ಉಡುಪಿಯಲಿ ನಿ೦ದ ಎ೦ದರೆ ಒಪ್ಪುತ್ತಾರೆ, ರುಕ್ಮಿಣಿ ಕೃಷ್ಣ ನ ಪೂಜೆ ಮಾಡ್ತಾರೆ.
ಗೋವಿ೦ದ ಗೋವಿ೦ದ ಎ೦ದು ತಿರುಪತಿ ತನಕ ಹೋಗಿ ಬರ್ತಾರೆ. ಅ೦ದಮೇಲೆ ಇದು ಒಪ್ಪಲೇ ಬೇಕು ತಾನೆ.
ಪ್ರೀತಿ ಮಾಡದ ವ್ಯಕ್ತಿ ಇಲ್ಲ. ಕೃಷ್ಣನಿಗೆ ರಾಧೆಯಲ್ಲಿ ಮೂಡಿದ ಪ್ರೀತಿ ನಿಜಕ್ಕೂ ಎಲ್ಲವನ್ನೂ ಹೇಳುತ್ತದೆ. ಬೇರೆ ಮಾತಿಲ್ಲ.ಜೀವಿಸಲು ಪ್ರೀತಿಯೆ ಉಸಿರು.
ನಮ್ಮ ಮನಸಿನಲ್ಲಿ ಕೃಷ್ಣ ನ ಬಿ೦ಬ ನೆಲೆನಿ೦ತಾಗ ಎಲ್ಲಿ ಹೋದರೂ ಅವನೇ ಕಾಣುವನು, ಪ್ರಕೃತಿಯೇ ಅವನು, ಮುರುಳಿಯ ನಾದದಲಿ, ನವಿಲಿನ ಕುಣಿತದಲಿ, ಹರಿವ ನದಿಯ ಗಾನದಲಿ
ಎಲ್ಲೇಲ್ಲೂ ಅವನದೇ ಛಾಯೆ-ಮಾಯೆ.

ಈ ಬಾರಿ ನನಗೆ ಎರಡು ಸಲಿ ಅವಕಾಶ ಸಿಕ್ಕಿತು ಇಸ್ಕಾನ್ ಟೆ೦ಪಲ್ ಗೆ ಹೋಗಲು. ಅದೇ ಸ೦ತೋಷ. ಅಲ್ಲಿ ತುಳಸಿ ಕಟ್ಟೆ ಇದೆ, ಅರ್ಗ್ಯ ಬಿಡಲು, ನಡೆಯುವ ಪೂಜೆ,
ಸಣ್ಣ ಮೂರ್ತಿ ಇವೆ ಪಲ್ಲಕ್ಕಿ ಸೇವೆ ಮಾಡಲು. ಅಲ೦ಕಾರವೂ ಚೆನ್ನಾಗಿ ಮಾಡುತ್ತಾರೆ, ಎಲ್ಲವೂ ವ್ಯವಸ್ತಿತ ವಾಗಿ ಮಾಡುತ್ತರೆ. ಅದಕ್ಕೆ ಜನ ಸಾಗರವೇ ಬರುತ್ತದೆ. ಎಲ್ಲರೂ ತನ್ಮಯದಿ೦ದ ಕುಣಿಯುತ್ತಾರೆ.
ಕೃಷ್ಣ ಹೇಳುವುದು ಅದನ್ನೇ, ಮನಸನ್ನು ಖುಷಿಯಾಗಿರಿಸಿಕೊಳ್ಳಿ ಎ೦ದು. ಹೊಟ್ಟೆ ತು೦ಬಾ ಊಟ, ಕಣ್ತು೦ಬಾ ನಿದಿರೆ, ದೇವರ ನಾಮ, ಭಕ್ತಿ , ಇದ್ದರೆ ನೆಮ್ಮದಿಯ ಜೀವನ ನಮ್ಮ ಪಾಲಿಗೆ.


>> ಹರೆ ಕೃಷ್ಣಾ..!!

No comments:

Post a Comment