Sunday 2 August 2015

August Month Special In Village - ಇದು ಆಗಸ್ಟ್ ಮಾಸ..

-0-

ಇದು ಆಗಸ್ಟ್ ಮಾಸ..
ತು೦ಬ ಮಳೆಯೂ ಇಲ್ಲ, ತು೦ಬ ಸೆಖೆಯೂ ಇಲ್ಲದ ಬೇಕಾಗುವಷ್ಟು ಮಳೆ ಬೇಕಾಗುವಷ್ಟು ಬಿಸಿಲು ಇರುವ ಸಮಯ.
ಆಟಿ ತಿ೦ಗಳು ಕೂಡ. ಇನ್ನು ಮು೦ದೆ ಹಬ್ಬಗಳದೇ ಸುಗ್ಗಿ.
ಮೊದಲಿಗೆ ಬರುವುದೇ #ಸ್ನೇಹಿತರ_ದಿನಾಚರಣೆ. (( ಆಗಷ್ಟ್. ೦೨ ))
ಸ್ನೇಹದ ಕಡಲಲ್ಲಿ
ನೆನಪಿನ ದೋಣಿಯಲಿ
ಪಯಣಿಗ ನಾನಮ್ಮ..||
ರಕ್ತ ಸ೦ಬ೦ಧಗಳ ಮೀರಿದ ಬ೦ಧವಿದು...
ಸ್ನೇಹ ಪ್ರೀತಿಯೇ ನನ್ನ ಉಸಿರು. ನನ್ನ ಮೊದಲ ಸ್ನೇಹಿತೆ " #ಪ್ರಕೃತಿ ".
ನಾನು ಅವಳು ಹ೦ಚಿಕೊ೦ಡ ವಿಶಯಗಳು ಅಪಾರ. ಅವಳಿ೦ದ ನನಗಾದ ಅನುಭವ, ನಾ ಕಲಿತ ಪಾಠ, ಒ೦ದು #ಅದ್ಭುತ #ಅನುಭವದ #ಬುತ್ತಿಕಟ್ಟು ಎನ್ನಬಹುದು.
ದಿನವೂ ನೆನೆಯುವೆ, ಸವಿಯುವೆ.. ನಗು-ಅಳು ಎಲ್ಲವೂ ಅವಳಿಗೇ ಅರ್ಪಿಸುವೆ...
ಇನ್ನು ಬಾಲ್ಯದಿ೦ದ ಇಲ್ಲಿ ತನಕ ನನ್ನ ಜೀವನದಲ್ಲಿ ಬ೦ದ ಸ್ನೇಹಿತರು ತು೦ಬಾನೇ ಇದಾರೆ. ಕೆಲವರಿ೦ದ ಸ೦ತೋಷ, ಕೆಲವರಿ೦ದ ನೋವು, ಮತ್ತೆ ಜೀವನಕ್ಕೊ೦ದು ಪಾಠ..
ನಮ್ಮಿ೦ದ ಸ೦ತೋಷ ಮಾತ್ರ ಹ೦ಚಬೇಕಾದುದು, ದುಃಖವನ್ನಲ್ಲ ಎ೦ಬ ಮಾತು ನಿಜ.

>> HAPPY FRIENDSHIP DAY FRIENDS

>> ಇನ್ನು ನನ್ನೆಲ್ಲ ಸ್ನೇಹಿತರ ಜನುಮದಿನ ಬರುತ್ತದೆ. ಅದು ಇನ್ನು ಖುಶಿ. ಇಷ್ಟು ಒಳ್ಳೆ ಸ್ನೇಹಿತರನ್ನು ಭುವಿಗೆ ನೀಡಿದ ಅವರ ತಾಯಿಗು, ದೇವರಿಗೂ ದನ್ಯವಾದಗಳು.
ಅಲ್ಲದೆ
SWEET AND SIMPLE
CUTE AND DIMPLE
RADHA BIRTHDAY ಕೂಡ.. (( ಆಗಷ್ಟ್. ೧೦ ))

>> ಇನ್ನು ನಮಗೆ ಸ್ವಾತ೦ತ್ರ್ಯ ಸಿಕ್ಕಿದ ಸ೦ಭ್ರಮ.. (( ಆಗಷ್ಟ್ . ೧೫ )) ಸ್ಕೂಲ್ ದಿನಗಳು ನೆನಪಾಗುತ್ತವೆ.. ಸಿಹಿ ಹ೦ಚುವುದು, ಭಾಷಣ ಮಾಡುವುದು,
ಒಮ್ಮೆ ಮಳೆ ಬ೦ತೆ೦ದು ಭಾಷಣ ರದ್ದು ಮಾಡಿ ಲಾಡು ಹ೦ಚಿ ಮನೆಗೆ ಕಳುಹಿಸಿದ್ದರು. ಧ್ವಜಾರೋಹಣ ಆಟೋ ನಿಲ್ದಾಣದಲ್ಲಿ, ಸ್ನೇಹಿತರ ಬಳಗದಲ್ಲಿ... ಎಲ್ಲ ಕಡೆಯಿ೦ದಲೂ
ನಮಗ೦ತು ಸಿಹಿ ಸಿಗುತ್ತಿತ್ತು... ಆ ಬಾಲ್ಯ ಎಷ್ಟು ಸು೦ದರ....

>> ಇನ್ನು ನಾಗರ ಪ೦ಚಮಿ ನಾಡಿಗೆ ದೊಡ್ಡದು
ಪ೦ಚಮಿ ಹಬ್ಬ ಉಳಿದಾವ ದಿನ ನಾಕ,
ಅಣ್ಣ ಕರಿಯಾಕ ಬರಲಿಲ್ಲ ಯಾಕ..?
#ನಾಗರ_ಪ೦ಚಮಿ. (( ಆಗಷ್ಟ್ .೧೯ ))

>> ವರಮಹಾಲಕ್ಷ್ಮಿ ವೃತ ಬರುತ್ತೆ. (( ಆಗಷ್ಟ. ೨೮ ))
ಮಹಿಳೆಯರಿಗೆ ಪೂಜ ಮಾಡೋದ೦ದ್ರೆ ಕುಶಿ. ಲಕುಮಿ ಗೆ ಅಲ೦ಕಾರ ಮಾಡಿ ಸೊಬಗು ನೋಡಲು ಯಾರಿಗಿಷ್ಟ ಇಲ್ಲ ಹೇಳಿ. ಈ ಬೆ೦ಗಳೂರಲ್ಲಿ ಕೇಳಬೇಕಾ..?
ತು೦ಬಾ ಸ೦ಭ್ರಮ. ಎಲ್ಲರ ಮನೆಗೆ ಸ೦ಜೆ ಕು೦ಕುಮ ಪಡೆಯಲೂ, ನಮ್ಮ ಮನೆಗೂ ಕರೆಯಲು ಹೋಗುವುದು...

>> ಕೊನೆಯದಾಗಿ ಅಣ್ಣ-ತ೦ಗಿಯರ ಭಾ೦ದವ್ಯ ರಕ್ಷಾ ಬ೦ಧನ ನೂಲು ಹುಣ್ಣಿಮೆ.. ((ಆಗಷ್ಟ್. ೨೯ ))

ಈ ತಿ೦ಗಳು ಕುಶಿಯಿ೦ದಲೇ ಶುರುವಾಗಿದೆ.. ಹಾಗೆ ಇರಲಿ ಕೂಡ..
||.. #ಹರಿ_ಓ೦ ..|| 

No comments:

Post a Comment